ದಾವಣಗೆರೆ: ತುಂಗಭದ್ರಾ ನದಿ ಪಾತ್ರದ ಜನರಿಗೆ ಪ್ರವಾಹ ಆತಂಕ - Tungabhadra Flood - TUNGABHADRA FLOOD

🎬 Watch Now: Feature Video

thumbnail

By ETV Bharat Karnataka Team

Published : Jul 24, 2024, 11:37 AM IST

ದಾವಣಗೆರೆ: ತುಂಗಭದ್ರಾ ನದಿ ತಟದಲ್ಲಿರುವ ಬಾಲರಾಜ್​​​ ಘಾಟ್​​​​​​ ಪ್ರದೇಶದ ಜನತೆಯ ಬದುಕು ಸಂಕಷ್ಟದಲ್ಲಿದೆ. ಬಾಲರಾಜ್ ಘಾಟ್ ತುಂಗಭದ್ರಾ ನದಿ ಸಮೀಪದಲ್ಲಿದೆ. ತುಂಗಾ ಹಾಗು ಭದ್ರಾ ಜಲಾಶಯಗಳಿಂದ ನದಿಗೆ ನೀರು ಹರಿಸಿದರೆ ಇಲ್ಲಿಯ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗುತ್ತವೆ. 

ಪ್ರವಾಹಕ್ಕೆ ತುತ್ತಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ವಾಸ ಮಾಡಬೇಕಾಗುತ್ತದೆ. ಕಳೆದ 25 ವರ್ಷದಿಂದಲೂ ಇವರು ಇಲ್ಲಿಯೇ ಸೂರು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ‌. ತುಂಗಾ ಜಲಾಶಯದಿಂದ ನೀರು ಹರಿಸಿದ್ದರಿಂದ ಪ್ರವಾಹ ಸೃಷ್ಟಿಯಾಗಿ 3-4 ದಿನಗಳ ಕಾಲ ಜನರು ಮನೆ ಖಾಲಿ ಮಾಡಿದ್ದರು. ಒಂದು ವೇಳೆ, ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟರೆ ಶಾಶ್ವತವಾಗಿ ಮನೆಗಳನ್ನು ತೊರೆಯಬೇಕುತ್ತದೆ. 

"ಗ್ರಾಮಸ್ಥರು ಮನೆಗಳನ್ನು ಖಾಲಿ ಮಾಡದೇ ಇದ್ದರೆ ಜೆಸಿಬಿ ತಂದು ಒಡೆದು ಹಾಕುತ್ತೇವೆ. ಬಾಡಿಗೆ ಮನೆಗಳನ್ನು ಪಡೆದು ತೆರಳಿ ಎಂದು ಅಧಿಕಾರಿಗಳು, ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ" ಎಂದು ಬಾಲರಾಜ್ ಘಾಟ್​ ನಿವಾಸಿ ಬಾಷಾ ಎಂಬವರು ಆರೋಪಿಸಿದರು.  

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: 'ನಮ್ಮ ಕೆಲಸಕ್ಕೆ ಕೇರಳದವರು ಅಡ್ಡಿ ಮಾಡಬೇಡಿ'- ಶಾಸಕ ಸೈಲ್ ಮನವಿ - Shiruru Hill Collapse Case

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.