ಮಧ್ಯಪ್ರದೇಶ: 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ ಜ್ವಾಲಾ-ವಿಡಿಯೋ

By ETV Bharat Karnataka Team

Published : Jan 23, 2024, 11:31 AM IST

Updated : Jan 23, 2024, 7:18 PM IST

thumbnail

ಮಧ್ಯಪ್ರದೇಶ: ಭಾರತದಲ್ಲಿ ಚೀತಾ ಸಂಖ್ಯೆ ಉತ್ತೇಜಿಸುವ ಯೋಜನೆಗೆ ಇದು ಶುಭ ಸುದ್ದಿ. ಇದೀಗ ಮೂವರು ಹೊಸ ಅತಿಥಿಗಳ ಆಗಮನದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಉದ್ಯಾನವನಕ್ಕೆ ನಮೀಬಿಯಾದ ತಂದಿದ್ದ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ. ಇದರ ವಿಡಿಯೋವನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

"ಇದು ಕುನೋದ ಹೊಸ ಚೀತಾ ಮರಿಗಳು. ಜ್ವಾಲಾ ಮೂರು ಮರಿಗಳಿಗೆ ಜನ್ಮ ಕೊಟ್ಟಿದೆ. ಆಶಾ ಮರಿಗಳಿಗೆ ಜನ್ಮ ನೀಡಿದ ಕೆಲವೇ ವಾರಗಳ ಬಳಿಕ ಇದು ಸಂಭವಿಸಿದೆ. ಭಾರತದ ವನ್ಯಜೀವಿಗಳು ಅಭಿವೃದ್ಧಿ ಹೊಂದಲಿ" ಎಂದು ಭೂಪೇಂದ್ರ ಯಾದವ್ ಎಕ್ಸ್​ ಖಾತೆಯಲ್ಲಿ ತಿಳಿಸಿದ್ದಾರೆ.

ಒಂದೇ ತಿಂಗಳಲ್ಲಿ 6 ಚೀತಾ ಮರಿಗಳ ಜನನ: ಜನವರಿ 3ರಂದು ಚೀತಾ ಆಶಾ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಈ ಮೂಲಕ ಉದ್ಯಾನದಲ್ಲಿ ಒಂದೇ ತಿಂಗಳಲ್ಲಿ 6 ಚೀತಾಗಳು ಹುಟ್ಟಿವೆ. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದಿರುವ ಚಿರತೆಗಳು ಕುನೋ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಾರಂಭಿಸಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಹುಲ್​ ನ್ಯಾಯಯಾತ್ರೆಗೆ ಅಡಚಣೆ ಖಂಡಿಸಿ ರಾಜ್ಯ ಕಾಂಗ್ರೆಸ್​ ಇಂದು ಪ್ರತಿಭಟನೆ

Last Updated : Jan 23, 2024, 7:18 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.