ವಿಡಿಯೋ: ಮಂಡ್ಯದ ಹಲವೆಡೆ ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಜನ; ನಡುಗಿದ ಭೂಮಿ
🎬 Watch Now: Feature Video
ಮಂಡ್ಯ: ನಗರ ಸೇರಿದಂತೆ ಹಲವೆಡೆ ನಿಗೂಢ ಶಬ್ದ ಕೇಳಿಬಂದಿದ್ದು, ಕೆಲಕಾಲ ಜನರು ಆತಂಕಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ 1.20 ರಿಂದ 1.30ರ ವೇಳೆಯಲ್ಲಿ ಈ ಶಬ್ದ ಉಂಟಾಗಿದ್ದು, ಭೂಮಿ ಕಂಪಿಸಿದ ಅನುಭವವೂ ಆಗಿದೆ.
ಭಾರಿ ಶಬ್ದದ ಜೊತೆಗೆ ಹಲವೆಡೆ ಮನೆ, ಅಂಗಡಿಗಳ ಬಾಗಿಲು ಹಾಗೂ ಕಿಟಕಿಗಳು ಅಲುಗಾಡಿವೆ. ಶಬ್ದ ಕೇಳಿ ಜನರು ಬೆಚ್ಚಿಬಿದ್ದಿದ್ದು, ಮನೆಗಳಿಂದ ಹೊರಗಡೆ ಓಡಿ ಬಂದಿದ್ದಾರೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಭೂಮಿ ನಡುಗುತ್ತಿರುವ ವಿಡಿಯೋ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಲಡಾಖ್‌ನಲ್ಲಿ ಬೆಳ್ಳಂಬೆಳಿಗ್ಗೆ 3.4 ತೀವ್ರತೆಯ ಭೂಕಂಪ
ಇತ್ತೀಚೆಗೆ ಲಡಾಖ್‌ನ ಕಾರ್ಗಿಲ್‌ನಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿತ್ತು. NCS ಪ್ರಕಾರ, ಮಧ್ಯಾಹ್ನ 2:42 ಕ್ಕೆ ಭೂಕಂಪನ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು 10 ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿತ್ತು. ಭೂಕಂಪದಿಂದ ಯಾವುದೇ ಹಾನಿಯಾಗಿರಲಿಲ್ಲ. ಕಂಪನದ ಅನುಭವವಾದ ತಕ್ಷಣ ಜನರು ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದರು.
ಇದನ್ನೂ ಓದಿ: ಚೀನಾದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ, ದೆಹಲಿಯಲ್ಲೂ ನಡುಗಿದ ಭೂಮಿ