ಮುಂಬೈನ ಗ್ರಾಂಟ್ ರೋಡ್ ಟಿಂಬರ್ ಮಾರ್ಕೆಟ್ನಲ್ಲಿ ಅಗ್ನಿ ಅವಘಡ : ವಿಡಿಯೋ - Mumbai Fire
🎬 Watch Now: Feature Video
Published : Jan 26, 2024, 5:22 PM IST
|Updated : Jan 26, 2024, 8:43 PM IST
ಮುಂಬೈ (ಮಹಾರಾಷ್ಟ್ರ) : ಗ್ರಾಂಟ್ ರೋಡ್‌ನ ಕಾಮಾಟಿಪುರ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಬೆಳಗಿನ ಜಾವ 2 ಗಂಟೆಗೆ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ. ಬೆಂಕಿ ನಂದಿಸಲು 16 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು.
ಅಗ್ನಿಶಾಮಕ ಇಲಾಖೆಯ ಮಾಹಿತಿಯ ಪ್ರಕಾರ, ಗ್ರಾಂಟ್ ರಸ್ತೆಯ ಕಾಮಾಟಿಪುರ ಪ್ರದೇಶದ ಪ್ರಸಿದ್ಧ ರೆಸ್ಟೋರೆಂಟ್ ಜಾಫರ್ ಬಾಯಿ ದೆಹಲಿ ದರ್ಬಾರ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಸಮೀಪದ ಇತರ ಅಂಗಡಿಗಳು ಹಾಗೂ ಬಹುಮಹಡಿ ಕಟ್ಟಡಕ್ಕೆ ಬೆಂಕಿ ಆವರಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳವನ್ನು ತೆರವುಗೊಳಿಸುತ್ತಿದ್ದಾಗ ಸ್ನಾನಗೃಹದಲ್ಲಿ ಅಪರಿಚಿತ ವ್ಯಕ್ತಿಯ ಸುಟ್ಟ ಶವ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ರವಾನಿಸಲಾಗಿದೆ. ಇತರ ಗಾಯಾಳುಗಳು ಮತ್ತು ನಾಪತ್ತೆಯಾದವರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಂಬೈ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಬೆಂಕಿ ಅವಘಡಕ್ಕೆ ಕಾರಣವೇನು? : 7000 ಚದರ ಅಡಿಯಿಂದ 8000 ಚದರ ಅಡಿ ವಿಸ್ತೀರ್ಣದ ರೆಸ್ಟೋರೆಂಟ್‌ನಲ್ಲಿ ವಿದ್ಯುತ್ ವೈರಿಂಗ್ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಈ ರೆಸ್ಟೋರೆಂಟ್ನಲ್ಲಿದ್ದ ಮರ ಮತ್ತು ರಾಸಾಯನಿಕಗಳಿಗೆ ಬೆಂಕಿ ತಗುಲಿ ಎರಡು ಮಹಡಿಗಳು ಸುಟ್ಟುಹೋಗಿವೆ. ಸುಮಾರು 400 ರಿಂದ 500 ಅಂಗಡಿಗಳಿಗೂ ಈ ಬೆಂಕಿಯ ಕೆನ್ನಾಲಿಗೆ ಚಾಚಿದೆ.
ಈ ನಡುವೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ತಡರಾತ್ರಿ ಅಗ್ನಿಶಾಮಕ ದಳದ ನಾಲ್ಕು ಘಟಕಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೆಸ್ಟೋರೆಂಟ್‌ನಿಂದ ದೊಡ್ಡ ಜ್ವಾಲೆಗಳು ಹೊರಬರುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಇದನ್ನೂ ಓದಿ: ದೆಹಲಿಯ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ