ಅಲಿ ದೇವರ ಜೊತೆಗೆ ಕೆಂಡ ತುಳಿದ ಆಂಜನೇಯ ಸ್ವಾಮಿ; ಮೊಹರಂ ಹಬ್ಬಕ್ಕೆ ತೆರೆ - Muharram festival
🎬 Watch Now: Feature Video
Published : Jul 18, 2024, 1:43 PM IST
ದಾವಣಗೆರೆ : ಜಿಲ್ಲೆಯಲ್ಲಿ ಮೊಹರಂ ಹಬ್ಬಕ್ಕೆ ತೆರೆ ಬಿದ್ದಿದೆ. ಬುಧವಾರ (ಜು.17) ಕೊನೆ ದಿನ ಆಗಿದ್ದರಿಂದ ಹಿಂದೂ-ಮುಸ್ಲಿಂ ಬಾಂಧವರು ಸೇರಿ ಹಬ್ಬ ಆಚರಣೆ ಮಾಡಿದರು. ಹಳೇಕುಂದವಾಡದಲ್ಲಿ ಆಂಜನೇಯ ಸ್ವಾಮಿಯ ಸಮ್ಮುಖದಲ್ಲಿ ಮೊಹರಂ ಹಬ್ಬ ವಿಶೇಷವಾಗಿ ಜರುಗಿತು. ಇದೇ ಮೊದಲ ಬಾರಿಗೆ ಅಲಿ ದೇವರು ಹಾಗು ಆಂಜನೇಯ ಸ್ವಾಮಿ ಇಬ್ಬರು ಒಟ್ಟಿಗೆ ಕೆಂಡಾಚರಣೆಯಲ್ಲಿ ಪಾಲ್ಗೊಂಡು ಕೆಂಡು ತುಳಿತಿದ್ದನ್ನು ಭಕ್ತರು ಕಣ್ತುಂಬಿಕೊಂಡರು.
ದಾವಣಗೆರೆ ತಾಲೂಕಿನ ಹಳೇ ಕುಂದವಾಡ ಗ್ರಾಮದಲ್ಲಿ ಮೊಹರಂ ಹಬ್ಬಕ್ಕೆ ಹಲವು ವರ್ಷಗಳ ಇತಿಹಾಸ ಇದೆ. ಭಕ್ತರು ದೇವರಲ್ಲಿ ಬೇಡಿಕೊಂಡದ್ದು ಈಡೇರಿರುವ ಉದಾಹರಣೆಗಳಿವೆ. ಈ ಬಾರಿ ಭಕ್ತರು ಅಲಿ ದೇವರನ್ನು ಹಾಗೂ ಆಂಜನೇಯ ಸ್ವಾಮಿಯನ್ನು ಹೊತ್ತು ಕೆಂಡ ಹಾಯುವ ದೃಶ್ಯ ಕಂಡು ಭಕ್ತಿಪರಾಕಾಷ್ಠೆ ಮೆರೆದರು. ಭಕ್ತರು ಉಭಯ ದೇವರನ್ನು ಒಟ್ಟಿಗೆ ಕಣ್ಣು ತುಂಬಿಕೊಂಡು ಹರಕೆ ಸಮರ್ಪಿಸಿದರು.
ಇದನ್ನೂ ಓದಿ : ಜಕ್ಕನಾಯಕನಕೊಪ್ಪ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೊಹರಂ ಆಚರಣೆ - Muharram Celebration
ಇದನ್ನೂ ಓದಿ : ಕೊಪ್ಪಳ: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಮೊಹರಂ - muharram celebration