ಶ್ರೀನಿವಾಸ ಪ್ರಸಾದ್ ಈಗ ಬಿಜೆಪಿಯಲ್ಲಿಲ್ಲ, ಕಾಂಗ್ರೆಸ್ನಲ್ಲಿದ್ದಾರೆ: ಶಾಸಕ ಪುಟ್ಟರಂಗಶೆಟ್ಟಿ - MLA Puttarangashetty - MLA PUTTARANGASHETTY
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/07-04-2024/640-480-21166940-thumbnail-16x9-sefeddd.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Apr 7, 2024, 6:18 PM IST
ಚಾಮರಾಜನಗರ: ಹಾಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿಯಲ್ಲಿಲ್ಲ, ಅವರು ಈಗ ಕಾಂಗ್ರೆಸ್ನಲ್ಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ಚಾಮರಾಜನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಸಂಸದರು ಆಗ ಹೋಗಬೇಕಿತ್ತು, ಹೋಗಿದ್ದರು. ಆದರೆ, ಅವರಿಗೆ ಬಿಜೆಪಿ ಸಿದ್ಧಾಂತ ಹಿಡಿಸಿಲ್ಲ. ಆದರೆ, ಖಂಡಿತವಾಗಿಯೂ ಈಗ ಪ್ರಸಾದ್ ಅವರು ಬಿಜೆಪಿಯಲ್ಲಿಲ್ಲ ಎಂದರು.
ಸಂಸದರ ಬಹುಪಾಲು ಬೆಂಬಲಿಗರು ಕಾಂಗ್ರೆಸ್ಗೆ ಬಂದಿದ್ದಾರೆ. ಕಾಂಗ್ರೆಸ್ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಬಿಜೆಪಿಯವರಂತೆ ಸುಳ್ಳು ಹೇಳಿ ಮತ ಕೇಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 12ರಂದು ಕೊಳ್ಳೇಗಾಲಕ್ಕೆ ಭೇಟಿ ನೀಡಲಿದ್ದಾರೆ. ಗುಂಡ್ಲುಪೇಟೆಯಲ್ಲೂ ಸಮಾವೇಶ ನಡೆಸುವ ಸಾಧ್ಯತೆ ಇದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು: ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವಿವಾಹಿತರೆಂದು ಸುಳ್ಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ಮುಖಂಡರು ದೂರು ನೀಡಿದ್ದರು. ಏ.3ರಂದು ಚಾಮರಾಜನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಸಿದ್ದರು. ಅಫಿಡವಿಟ್ನಲ್ಲಿ ಪತ್ನಿ, ಅವಲಂಬಿತರು ಯಾರೂ ಇಲ್ಲ ಎಂದು ನಮೂದಿಸಿದ್ದಾರೆ ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿತ್ತು.
ಇದನ್ನೂ ಓದಿ: ಮದ್ಯಪ್ರಿಯರಿಗೆ ಮತದಾನ ಜಾಗೃತಿ: ರಾಜಕಾರಣಿಗಳ ಮದ್ಯದಂಗಡಿಗಳ ಮೇಲೆ ಕಟ್ಟೆಚ್ಚರ - Voting Awareness