ಹೆಗಲ ಮೇಲೆ ಮಗು ಹೊತ್ತು ಮಹಿಳಾ ಕಾನ್ಸ್‌ಟೇಬಲ್ ಕರ್ತವ್ಯ ನಿರ್ವಹಣೆ; ಸಾರ್ವಜನಿಕರಿಂದ ಪ್ರಶಂಸೆ - ಮೊರಾದಾಬಾದ್ ಜಿಲ್ಲೆ
🎬 Watch Now: Feature Video
Published : Feb 18, 2024, 4:45 PM IST
ಮೊರಾದಾಬಾದ್ (ಉತ್ತರಪ್ರದೇಶ): ಸರ್ಕಾರ ಮಹಿಳಾ ನೌಕರರಿಗೆ ಮಕ್ಕಳ ಲಾಲನೆ ಪಾಲನೆಗೆ ಹಲವಾರು ಯೋಜನೆಗಳನ್ನು ಘೋಷಿಸಿವೆ. ಆ ಯೋಜನೆಗಳ ಲಾಭವನ್ನು ಮಹಿಳಾ ನೌಕರರು ಸಹ ಪಡೆಯುತ್ತಿದ್ದಾರೆ. ಆದರೆ ಕೆಲವೊಂದು ಸಲ ಇಬ್ಬರು ದಂಪತಿ ಸರ್ಕಾರಿ ನೌಕರರಿದ್ದು ಒಂದೇ ಸಮಯಕ್ಕೆ ಕರ್ತವ್ಯಕ್ಕೆ ಬಂದರೆ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಂದರೆ ಅನುಭವಿಸುವುದು ಸಹಜ.
ಇಂಥ ಘಟನೆಯೊಂದು ಮೊರಾದಾಬಾದ್ ಜಿಲ್ಲೆಯ ಎಸ್ಎಸ್ ಇಂಟರ್ ಕಾಲೇಜಿನಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ಮಹಿಳಾ ಪೊಲೀಸರೊಬ್ಬರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಡ್ಯೂಟಿ ನಿರ್ವಹಿಸುತ್ತಿದ್ದನ್ನು ಕಂಡು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪೊಲೀಸ್ನ ಪತಿ ಹಾಗೂ ಸಹೋದರಿ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರೂ, ಪತಿ ಪೊಲೀಸ್ ಆಗಿದ್ದು, ಅವರು ಬೇರೆ ಕಡೆ ಕಾನ್ಸ್‌ಟೇಬಲ್ ಪರೀಕ್ಷೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಹೋದರಿಗೂ ಪೊಲೀಸ್ ಪರೀಕ್ಷೆ ಇತ್ತು ಎಂದಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ಗೀತಾ ಅವರು ಇಂದು ಏಕಕಾಲಕ್ಕೆ ತಾಯಿಯ ನಿವಾಬ್ದಾರಿ ಹಾಗೂ ಸಮವಸ್ತ್ರ ಧರಿಸಿ ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಿಸಿದರು.
5 ತಿಂಗಳಿಂದ ಮಗನ ಜೊತೆ ಡ್ಯೂಟಿ: ಈ ಕುರಿತು ಮಾತನಾಡಿರುವ ಕಾನ್ಸ್‌ಟೇಬಲ್ ಗೀತಾ, ಮಗ 5 ತಿಂಗಳು ಇದ್ದಾಗಿನಿಂದ ಪ್ರತಿದಿನ ತನ್ನೊಂದಿಗೆ ಕರ್ತವ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. ಈಗ ಅವರ ಮಗನಿಗೆ ಒಂದೂವರೆ ವರ್ಷ ಆಗಿದ್ದು, ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಮಗನ ಜೊತೆ ಡ್ಯೂಟಿ ಮಾಡುವಾಗ ತೊಂದರೆ ಕಡಿಮೆ ಎಂದು ತಿಳಿಸಿದ್ದಾರೆ.
ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಕರ್ತವ್ಯ ಶ್ಲಾಘಿಸಿದ ಎಸ್ಪಿ: ಮಹಿಳಾ ಪೊಲೀಸರು ಮಗುವಿನೊಂದಿಗೆ ಡ್ಯೂಟಿ ಮಾಡುವ ಕುರಿತು ವಿಚಾರಕ್ಕೆ ಸಂಬಂಧಿಸಿದಂತೆ ಮೊರಾದಾಬಾದ್ ಎಸ್ಪಿ ಸಿಟಿ ಅಖಿಲೇಶ್ ಬದೌರಿಯಾ ಪ್ರತಿಕ್ರಿಯಿಸಿ, ಮಹಿಳಾ ಪೊಲೀಸರ ಕರ್ತವ್ಯವನ್ನು ಶ್ಲಾಘಿಸಿದರು. ನಮ್ಮ ಪೊಲೀಸರು ಯಾವುದೇ ಸಂದರ್ಭದಲ್ಲಿಯೂ ತಮ್ಮ ಕರ್ತವ್ಯಕ್ಕೆ ಸದಾ ಸಿದ್ಧರಿರುತ್ತಾರೆ. ಮಹಿಳಾ ಪೊಲೀಸರ ಪತಿಯೂ ಪೊಲೀಸ್ ಇಲಾಖೆಯಲ್ಲಿದ್ದಾರೆ. ಪೊಲೀಸರು ತಮ್ಮ ಕರ್ತವ್ಯದ ಜತೆಗೆ ಕುಟುಂಬದ ಜವಾಬ್ದಾರಿಯನ್ನು ಸಹ ನಿಭಾಯಿಸುತ್ತಿದ್ದಾರೆ. ಇದನ್ನು ಎಲ್ಲರೂ ಮೆಚ್ಚಲೇಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪೊಲೀಸ್ ನೇಮಕಾತಿ ಪರೀಕ್ಷೆ: ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆಗೆ ಪೊಲೀಸರು ಹಾಗೂ ಆಡಳಿತ ಮಂಡಳಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನೂ ಓದಿ:ಶಂಭು ಗಡಿಯಲ್ಲಿ ರೈತರ 'ದಿಲ್ಲಿ ಚಲೋ' ಹೋರಾಟ ತೀವ್ರ: ಇಂದು 4ನೇ ಸುತ್ತಿನ ಮಾತುಕತೆ