'ಆಕಾಶಕ್ಕೆ ಉಗುಳಿದರೆ ತಿರುಗಿ ನಮ್ಮ ಮುಖಕ್ಕೇ ಬೀಳುತ್ತದೆ': ರಾಜು ಕಾಗೆಗೆ ಟೆಂಗಿನಕಾಯಿ ತಿರುಗೇಟು - Mahesh Tenginakai - MAHESH TENGINAKAI

🎬 Watch Now: Feature Video

thumbnail

By ETV Bharat Karnataka Team

Published : May 1, 2024, 8:35 PM IST

ಹುಬ್ಬಳ್ಳಿ: ನಾವು ನರೇಂದ್ರ ಮೋದಿ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇವೆ. ಮೋದಿಯವರು ಇಳಿ ವಯಸ್ಸಿನಲ್ಲೂ ದೇಶದ ಅಭಿವೃದ್ಧಿಯ ಕುರಿತು ಚಿಂತನೆ ಮಾಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಹಾಗೂ ರಾಜು ಕಾಗೆ ಯೋಚಿಸಬೇಕು ಎಂದು ಶಾಸಕ ಮಹೇಶ್​ ಟೆಂಗಿನಕಾಯಿ ತಿರುಗೇಟು ನೀಡಿದ್ದಾರೆ. 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪ್ರಧಾನಿ ಹುದ್ದೆಗೆ ಯಾರೂ ಸೂಕ್ತ ಅಭ್ಯರ್ಥಿ ಇಲ್ಲವೇನೋ ಎಂಬ ಶಾಸಕ ರಾಜು ಕಾಗೆ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2047ಕ್ಕೆ ಭಾರತವನ್ನು ಪ್ರಪಂಚದ ನಂಬರ್​ ಒನ್​ ರಾಷ್ಟ್ರ ಮಾಡುವುದು ನನ್ನ ಕಲ್ಪನೆ ಎಂದು ಮೋದಿ ಹೇಳಿದ್ದಾರೆಯೇ ಹೊರತು 2047ರ ತನಕ ನಾನಿರುತ್ತೇನೆ ಎಂದು ಹೇಳಿದ್ದಾರಾ?. ಕಾಂಗ್ರೆಸ್​ ನಾಯಕರ ಟೀಕೆಗೆ ಜನ ಮೇ.7ರಂದು ಉತ್ತರ ಕೊಡುತ್ತಾರೆ. ಆಕಾಶಕ್ಕೆ ಉಗುಳಿದರೆ ಅದು ತಿರುಗಿ ನಮ್ಮ ಮುಖಕ್ಕೇ ಬೀಳುತ್ತದೆ ಎಂಬುದನ್ನು ರಾಜು ಕಾಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಧಾನಿ ಕುರಿತು ಅವರ ಹೇಳಿಕೆ ಸರಿಯಲ್ಲ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿ ಭೇಟಿ ವಿಚಾರವಾಗಿ ಮಾತನಾಡುತ್ತಾ, ಇಂದು ನಡೆಯುವ ಬಹಿರಂಗ ಸಮಾವೇಶ ಅತ್ಯಂತ ಮಹತ್ವದ್ದಾಗಿದೆ. ಅಮಿತ್ ಶಾ ಭೇಟಿಯಿಂದ ಧಾರವಾಡ ಸೇರಿದಂತೆ ಇತರ ಕ್ಷೇತ್ರಗಳ ಅಭ್ಯರ್ಥಿಗಳಿಗೂ ಅನುಕೂಲವಾಗುತ್ತದೆ. ಅವರ ಆಗಮನದಿಂದ ಕಾರ್ಯಕರ್ತರಿಗೆ ಮತ್ತಷ್ಟು ಬೂಸ್ಟ್ ಸಿಗಲಿದೆ. ಶಾ ಜೊತೆ 58 ಪ್ರಮುಖರು ಭೇಟಿ ನೀಡುವರು. 50 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಎಲ್ಲ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹಾಸನ ಪೆನ್​ಡ್ರೈವ್ ಪ್ರಕರಣದ ತನಿಖೆಯಿಂದ ನಿಜ ಸಂಗತಿ ಬಯಲಾಗಲಿದೆ: ವಿನಯ್​ ಕುಲಕರ್ಣಿ - Hasan pen drive case

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.