ಗಜಪಡೆಯ ಮಾವುತರ ಮಕ್ಕಳೊಂದಿಗೆ ವಾಲಿಬಾಲ್‌ ಆಡಿದ ಸಚಿವ ಮಹದೇವಪ್ಪ: ವಿಡಿಯೋ - minister PLAYING VOLLYBAL - MINISTER PLAYING VOLLYBAL

🎬 Watch Now: Feature Video

thumbnail

By ETV Bharat Karnataka Team

Published : Sep 4, 2024, 10:36 PM IST

ಮೈಸೂರು: ದಸರಾ ಮಹೋತ್ಸವಕ್ಕೆ ಎಂದು ನಗರಕ್ಕೆ ಆಗಮಿಸಿರುವ ಗಜಪಡೆಗೆ ತಾಲೀಮು ಆರಂಭಿಸಲಾಗಿದೆ. ಭಾರವಾದ ಮರಳಿನ ಮೂಟೆಯನ್ನು ಹೊರಿಸಿ ಚಾಮುಂಡಿದೇವಿ ವಿಗ್ರಹ ಸಾಗುವ ಹಾದಿಯಲ್ಲಿ ನಡೆಸಲಾಗುತ್ತಿದೆ. ಇತ್ತ ಅರಮನೆಯ ಆವರಣದಲ್ಲಿ ಗಜಪಡೆಯೊಂದಿಗೆ ವಾಸ್ತವ್ಯ ಹೂಡಿರುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳೊಂದಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಬುಧವಾರ ಕೆಲ ಹೊತ್ತು ವಾಲಿಬಾಲ್‌ ಆಡಿದರು.

ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಇದರ ಅಂಗವಾಗಿ ಈಗಾಗಲೇ ನಗರದಲ್ಲಿ ಸಿದ್ದತೆಗಳು ಆರಂಭವಾಗಿವೆ. ದಸರಾ ಆಚರಣೆಗೆ 19 ಉಪಸಮಿತಿಗಳನ್ನು ರೂಪಿಸಲಾಗಿದೆ. ಈ ಉಪಸಮಿತಿಗಳ ಸಭೆ ನಡೆಸಿ, ಅರಮನೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಗಜಪಡೆ ವೀಕ್ಷಿಸಲು ಬಂದರು.

ಈ ವೇಳೆ ಶೆಡ್​​ನ ಪಕ್ಕದ ಮೈದಾನದಲ್ಲಿ ಮಾವುತರು ಹಾಗೂ ಕಾವಾಡಿಗಳ ಮಕ್ಕಳು ವಾಲಿಬಾಲ್‌ ಆಡುತ್ತಿರುವುದನ್ನು ನೋಡಿ ಅಲ್ಲಿಗೆ ತೆರಳಿದ ಸಚಿವರು, ಮಕ್ಕಳೊಂದಿಗೆ ಕೆಲ ಹೊತ್ತು ತಾವೂ ವಾಲಿಬಾಲ್‌ ಆಡಿದರು. ಮಕ್ಕಳು ಕೂಡ ಸಚಿವರ ಆಗಮನದಿಂದ ಸಂತಸಗೊಂಡರು. ಈ ವೇಳೆ ಅಧಿಕಾರಿಗಳು, ಪೊಲೀಸರು ಜೊತೆಗಿದ್ದರು.

ಇದನ್ನೂ ಓದಿ: ಹಳ್ಳಿಕಾರ್ ತಳಿಗಳ ಬಗ್ಗೆ ಅಪಪ್ರಚಾರ: ಪಶುಪಾಲನಾ ಇಲಾಖೆ ಆಯುಕ್ತರಿಗೆ ದೂರು - Hallikar breed

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.