ನೀರಿನಲ್ಲಿ ಲೀಲಾಜಾಲವಾಗಿ ಯೋಗ ಮಾಡುವ ಪೊಲೀಸ್​ ಅಧಿಕಾರಿ: ವಿಡಿಯೋ - International Yoga Day - INTERNATIONAL YOGA DAY

🎬 Watch Now: Feature Video

thumbnail

By ETV Bharat Karnataka Team

Published : Jun 21, 2024, 1:08 PM IST

ಅಮರಾವತಿ: ಅಮರಾವತಿ ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯೊಬ್ಬರು ನೀರಿನಲ್ಲಿ ಲೀಲಾಜಾಲವಾಗಿ ಯೋಗದ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಅಮರಾವತಿ ಪೊಲೀಸ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ್ ಅಖ್ರೆ ಇಂದು ಅಮರಾವತಿ ಪೊಲೀಸ್ ಈಜುಕೊಳದಲ್ಲಿ ನೀರೊಳಗಿನ ಯೋಗಾಭ್ಯಾಸ ಮಾಡಿದರು. ಅವರು ಎರಡು ನಿಮಿಷ ಮೂವತ್ತು ಸೆಕೆಂಡುಗಳ ಕಾಲ ನೀರಿನ ಅಡಿ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು.

ಯೋಗ ಸಾಧಕರಾಗಿರುವ ಪ್ರವೀಣ್ ಅಖ್ರೆ, ಅಮರಾವತಿ ಪೊಲೀಸ್ ಈಜುಕೊಳದಲ್ಲಿ ಮಕ್ಕಳಿಗೆ ಈಜು ಸಹ ಕಲಿಸುತ್ತಿದ್ದಾರೆ. ವಿಪತ್ತು ನಿರ್ವಹಣೆಯಲ್ಲೂ ಅಪಾರ ಕೊಡುಗೆ ನೀಡಿರುವ ಅವರು, ನೀರಿನಲ್ಲಿ ಮುಳುಗುತ್ತಿದ್ದ ಎಷ್ಟೋ ಜನರ ಜೀವ ರಕ್ಷಿಸಿದರೆ, ನೀರಿನಲ್ಲಿ ಕೊಚ್ಚಿ ಹೋದ ಎಷ್ಟೋ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಜಲಯೋಗ ಸಾಧಕರೂ ಆಗಿರುವ ಪ್ರವೀಣ್ ಅಖ್ರೆ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ನೀರಿನಲ್ಲಿ ಪರ್ವತಾಸನ, ಗರುಡಾಸನ, ವೃಕ್ಷಾಸನ, ಪದ್ಮಾಸನ, ಶವಾಸನ, ಹೀಗೆ ಹಲವಾರು ಜಲ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.

ಎಲ್ಲರೂ ಸಾಮಾನ್ಯ ಯೋಗ ಮಾಡುತ್ತಾರೆ. ಆದರೆ, ನೀರಿನಲ್ಲಿ ಯೋಗ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ನಮ್ಮ ಉದ್ಯೋಗಿ ಪ್ರವೀಣ್ ಅಖ್ರೆ ನೀರಿನ ಅಡಿಯಲ್ಲಿ ಯೋಗ ಮಾಡಿದ್ದಾರೆ. ಅವರು ನೀರಿನ ಮೇಲೆ ಮತ್ತು ಅಡಿ ಯೋಗ ಮಾಡುವ ಕರಗತ ಹೊಂದಿದ್ದಾರೆ. ಅವರ ಯೋಗ ಭಂಗಿಗಳು ಎಲ್ಲರಿಗೂ ಸ್ಫೂರ್ತಿದಾಯಕ. ಹಾಗಾಗಿ ಯೋಗಾಸನಗಳಲ್ಲಿ ಇತರರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ನಾವು ಅವರಿಗೆ ವಹಿಸಿದ್ದೇವೆ. ಅವರ ಈ ಕಾರ್ಯವೈಖರಿ ನಮ್ಮ ಉದ್ಯೋಗಿಗಳಿಗೆ ಹಾಗೂ ಸಾಮಾನ್ಯ ನಾಗರಿಕರಿಗೆ ಉತ್ತೇಜನ ನೀಡಲಿದೆ ಎಂದು ಪೊಲೀಸ್ ಆಯುಕ್ತ ನವೀನ್ ಚಂದ್ರ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರವೀಣ್ ಅಖ್ರೆ ಅವರು 28 ಮೇ 2003 ರಂದು ಅಮರಾವತಿಯ ತಕ್ಷಿಲಾ ಕಾಲೇಜಿನ ಈಜುಕೊಳದಲ್ಲಿ 22 ನಿಮಿಷ 52 ಸೆಕೆಂಡುಗಳಲ್ಲಿ ನೀರಿನಲ್ಲಿ 50 ಯೋಗಾಸನಗಳನ್ನು ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 

ಇದನ್ನೂ ಓದಿ: ಕೃತಕ ಕಾಲಿನಿಂದಲೇ ಯೋಗಾಭ್ಯಾಸ; ಬಲು ಕಷ್ಟದ ಆಸನಗಳು ಇವರಿಗೆ ಸುಲಲಿತ - practices yoga with artificial leg

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.