ಕಾಫಿನಾಡಲ್ಲಿ ಮಳೆ ಅಬ್ಬರ: ರಸ್ತೆ ಕುಸಿದು ಪ್ರಪಾತಕ್ಕೆ ಬಿದ್ದ ಲಾರಿ; ನೀರಿನಲ್ಲಿ ಕೊಚ್ಚಿಹೋದ ಕೋಣ - LORRY FALLS INTO ABYSS - LORRY FALLS INTO ABYSS

🎬 Watch Now: Feature Video

thumbnail

By ETV Bharat Karnataka Team

Published : Jul 21, 2024, 3:37 PM IST

ಚಿಕ್ಕಮಗಳೂರು: ನಿರಂತ ಮಳೆಯಿಂದಾಗಿ ರಸ್ತೆಯೊಂದು ಕುಸಿದ ಪರಿಣಾಮ ಅದೇ ರಸ್ತೆ ಮಾರ್ಗವಾಗಿ ಚಲಿಸುತ್ತಿದ್ದ ಲಾರಿ 50 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಶೃಂಗೇರಿ ತಾಲೂಕಿನ ನೆಮ್ಮಾರು ಎಂಬಲ್ಲಿ ನಡೆದಿದೆ. ಘಟನೆ ವೇಳೆ ಲಾರಿ ಚಾಲಕ ವಾಹನದಿಂದ ಹೊರಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶೃಂಗೇರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  

ಮತ್ತೊಂದೆಡೆ ಹಳ್ಳ ದಾಟಲು ಹೋಗಿ ಕೋಣವೊಂದು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕಳಸ ತಾಲೂಕಿನ ಮಾವಿನಹೊಲ ಬಳಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಕೋಣವೊಂದು ನೀರು ಪಾಲಾಗಿದ್ದು, ಜನರ ಕಣ್ಣೆದುರೇ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಕಳಸ ತಾಲೂಕಿನಲ್ಲೇ ಮೂರು ಹಸುಗಳು ಈವರೆಗೆ ಬಲಿಯಾಗಿದ್ದು, ಭಾರಿ ಮಳೆಯಿಂದಾಗಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. 

ಕಳೆದ ಎರಡು ವಾರಗಳಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ಕಳಸ ತಾಲೂಕಿನ ಹೆಬ್ಬಾಳ ಸೇತುವೆ ಮೇಲೆ ಹಸು ನಡೆದುಕೊಂಡು ಹೋಗುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿತ್ತು. 

ಇದನ್ನೂ ಓದಿ: ರಾಜ್ಯದ ಜಲಾಶಯಗಳು ಬಹುತೇಕ ಭರ್ತಿ: ಇಂದಿನ ನೀರಿನ ಮಟ್ಟ ಹೀಗಿದೆ - Water Levels Of Major Reservoirs

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.