ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅವರಿಗೆ ಶ್ರದ್ಧಾಂಜಲಿ - Tributes to Ramoji Rao - TRIBUTES TO RAMOJI RAO
🎬 Watch Now: Feature Video
Published : Jun 18, 2024, 6:12 PM IST
|Updated : Jun 18, 2024, 7:46 PM IST
ರಾಯ್ಪುರ್(ಛತ್ತಿಸ್ಗಡ್): 'ಈನಾಡು' ಸಮೂಹ ಸಂಸ್ಥೆಗಳ ಅಧ್ಯಕ್ಷ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅವರು ಜೂನ್ 8 ರಂದು ಇಹಲೋಕ ತ್ಯಜಿಸಿದ್ದಾರೆ. ರಾಮೋಜಿ ರಾವ್ ಅವರ ನಿಧನದಿಂದ ದೇಶದ ಪತ್ರಿಕೋದ್ಯಮ ಮತ್ತು ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರು ಭಾರತೀಯ ಮಾಧ್ಯಮ, ಪತ್ರಿಕೋದ್ಯಮ ಮತ್ತು ಚಲನಚಿತ್ರೋದ್ಯಮಕ್ಕೆ ಹೊಸ ದಿಕ್ಕನ್ನು ತೋರಿಸಿದ್ದಲ್ಲದೇ ಪತ್ರಿಕೋದ್ಯಮದಲ್ಲಿ ಪ್ರಾದೇಶಿಕತೆಗೆ ಒತ್ತು ನೀಡಿದ್ದರು.ರಾಮೋಜಿ ರಾವ್ ಅವರ ನಿಧನದಿಂದ ಛತ್ತೀಸ್‌ಗಢದ ಮಾಧ್ಯಮ ರಂಗವೂ ಕಂಬನಿ ಮಿಡಿದಿದೆ. ಛತ್ತೀಸ್‌ಗಢ ಫಿಲ್ಮ್ ಮತ್ತು ವಿಷುಯಲ್ ಆರ್ಟ್ ಸೊಸೈಟಿ ವತಿಯಿಂದ ರಾಯ್ಪುರದಲ್ಲಿ ರಾಮೋಜಿ ರಾವ್ ಅವರಿಗೆ ಇಂದು ಆಯೋಜಿಸಿರುವ ಶ್ರದ್ಧಾಂಜಲಿ, ನುಡಿ ನಮನ ಕಾರ್ಯಕ್ರಮದಲ್ಲಿ ನೂರಾರು ಪತ್ರಕರ್ತರು ಭಾಗಿಯಾಗಿದ್ದಾರೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪತ್ರಕರ್ತರು, ಚಲನಚಿತ್ರ ನಿರ್ಮಾಪಕರು ಭಾಗಿಯಾಗಿ, ಗೌರವ ನಮನ ಸಲ್ಲಿಸುತ್ತಿದ್ದಾರೆ. ಕಾರ್ಯಕ್ರಮ ನೇರ ಪ್ರಸಾರ ಇಲ್ಲಿದೆ. ಜಗತ್ಪ್ರಸಿದ್ಧ ಫಿಲ್ಮ್ ಸಿಟಿಯ ನಿರ್ಮಾತೃ ರಾಮೋಜಿ ರಾವ್ ಅವರು ಮಾಧ್ಯಲೋಕ ಅಷ್ಟೇ ಅಲ್ಲದೇ ಸಿನಿಮಾ ರಂಗಕ್ಕೂ ಅನನ್ಯ ಕೊಡುಗೆ ನೀಡಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಸೇವೆಯಲ್ಲೂ ರಾಮೋಜಿ ರಾವ್ ಅವರ ಕೊಡುಗೆ ಸ್ಮರಣೀಯ.
Last Updated : Jun 18, 2024, 7:46 PM IST