ಉಡುಪಿ: ನೀರಿನ ಟ್ಯಾಂಕ್‌ಗೆ ಬಿದ್ದ ಚಿರತೆ ರಕ್ಷಣೆ - ಚಿರತೆ
🎬 Watch Now: Feature Video
Published : Jan 30, 2024, 7:59 AM IST
ಉಡುಪಿ: ಚಿರತೆ ಮರಿಯೊಂದು ಆಹಾರ ಹುಡುಕುತ್ತಾ ಬಂದು ನೀರಿನ ಟ್ಯಾಂಕ್‌ಗೆ ಬಿದ್ದ ಘಟನೆ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಚಂದಣ ಎಂಬಲ್ಲಿ ನಡೆದಿದೆ. ಚಿರತೆಯ ಆಗಮನದಿಂದ ಗ್ರಾಮಸ್ಥರು ಭಯಭೀತರಾಗಿದ್ದರು. ಮುಳ್ಳಿನ ಪೊದೆಯೊಂದರ ಸಮೀಪದ ನೀರಿನ ಟ್ಯಾಂಕ್‌ಗೆ ಬಿದ್ದು ಹೊರಬರಲಾರದೆ ಚಿರತೆ ಚೀರಾಟ ಮಾಡುತ್ತಿತ್ತು.
ಬೈಂದೂರು ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ ಅವರು ಟ್ಯಾಂಕ್‌ನೊಳಗೆ ಚಿರತೆ ಸಿಕ್ಕಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಟ್ಯಾಂಕ್ ಆಳವಾದ್ದರಿಂದ ಜಿಗಿದು ಹೊರಬರಲು ಚಿರತೆಗೆ ಸಾಧ್ಯವಾಗಲಿಲ್ಲ. ಅದೃಷ್ಟವಶಾತ್ ಟ್ಯಾಂಕ್ ಒಳಗೆ ನೀರಿರಲಿಲ್ಲ. ತಕ್ಷಣ ಸ್ಥಳೀಯರನ್ನು ಕರೆದು ಮಾಹಿತಿ ನೀಡಿದ್ದಾರೆ. ಸ್ಥಳೀಯ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ನೀರಿನ ಟ್ಯಾಂಕ್‌ನೊಳಗೆ ಸಿಲುಕಿದ್ದ ಚಿರತೆಯನ್ನು ಕಾರ್ಯಾಚರಣೆ ನಡೆಸಿ ಹೊರ ತೆಗೆದು ಸುರಕ್ಷಿತವಾಗಿ ದಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ : ಮೈಸೂರು: ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಕಾರು ಡಿಕ್ಕಿ ಹೊಡೆದು ಹುಲಿ ಸಾವು, ಪ್ರಕರಣ ದಾಖಲು