ಚಲಿಸುತ್ತಿದ್ದ ಸಾರಿಗೆ ಬಸ್​​ನ ಬ್ರೇಕ್ ಫೇಲ್​; ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ - Bus brake failure

By ETV Bharat Karnataka Team

Published : Jun 18, 2024, 10:54 PM IST

thumbnail
ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ (ETV Bharat)

ಮೈಸೂರು: ಸಾರಿಗೆ ಬಸ್​ ಬ್ರೇಕ್ ಫೇಲ್​ ಆಗಿ ಜಮೀನಿಗೆ ನುಗ್ಗಿದ ಘಟನೆ ನಂಜನಗೂಡು ತಾಲೂಕಿನ ದೇವರಾಯಶೆಟ್ಟಿಪುರ ಬಳಿ ಮಂಗಳವಾರ ನಡೆದಿದೆ. ಹೆಚ್.ಡಿ‌. ಕೋಟೆ ಘಟಕಕ್ಕೆ ಸೇರಿದ ಕೆಎಸ್​ಆರ್​ಟಿಸಿ ಬಸ್ ಬೇಗೂರಿನಿಂದ ನಂಜನಗೂಡು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ಮಾರ್ಗವಾಗಿ ಹೆಚ್. ಡಿ ಕೋಟೆಗೆ ತೆರಳುತ್ತಿತ್ತು. ಈ ವೇಳೆ ಬಸ್​ ಬ್ರೇಕ್ ಫೇಲ್ ಆಗಿದೆ. ಎಚ್ಚೆತ್ತ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್​ಅನ್ನು ಸಮೀಪದ ಜಮೀನಿಗೆ ನುಗ್ಗಿಸಿ ಜನರ ಜೀವ ಉಳಿಸಿದ್ದಾರೆ. ಚಾಲಕನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲೂ ನಡೆದಿತ್ತು ಇಂತಹದ್ದೇ ಘಟನೆ: ಇತ್ತೀಚಿಗೆ, ಚಾರ್ಮಾಡಿ ಘಾಟ್​ ತಿರುವಿನಲ್ಲಿ ಕೆಎಸ್​ಆರ್​ಟಿಸಿ ಬಸ್ಸೊಂದರ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಿಂದ ತಪ್ಪಿದ ಘಟನೆ ನಡೆದಿತ್ತು. ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಬ್ರೇಕ್ ವೈಫಲ್ಯಕ್ಕೀಡಾಗಿತ್ತು. ಇದನ್ನು ಅರಿತ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ರಸ್ತೆಬದಿಯ ಡಿವೈಡರ್​ಗೆ ಡಿಕ್ಕಿ ಹೊಡೆಸಿ ಬಸ್​​ ನಿಲ್ಲುವಂತೆ ಮಾಡಿದ್ದರು. 

ಇದನ್ನೂ ಓದಿ: Watch: ಕಾರ್ ಶೋರೂಂ ಆವರಣದಲ್ಲಿ ಅಗ್ನಿ ಅವಘಡ; ವಾಹನಗಳು ಸುಟ್ಟು ಭಸ್ಮ - Fire at Car Showroom

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.