ಅಡುಗೆ ಕೋಣೆಯಲ್ಲಿ ಬುಸುಗುಡುತ್ತಿದ್ದ ಸರ್ಪ: ಕೇರೆ ಹಾವೆಂದುಕೊಂಡವರಿಗೆ ಹೆಡೆ ಎತ್ತಿ ಎಚ್ಚರಿಸಿದ ಕಾಳಿಂಗ! - King Cobra in Kitchen - KING COBRA IN KITCHEN
🎬 Watch Now: Feature Video
Published : Jun 10, 2024, 2:33 PM IST
ಕಾರವಾರ (ಉತ್ತರ ಕನ್ನಡ): ಅಡುಗೆ ಕೋಣೆಯಲ್ಲಿ ಮಿಕ್ಸರ್ ಗ್ರೈಂಡರ್ ಮೇಲೆ ಸುರುಳಿ ಸುತ್ತಿಕೊಂಡು ಕುಳಿತಿದ್ದ ಕಾಳಿಂಗ ಸರ್ಪವೊಂದನ್ನು ಉರಗ ತಜ್ಞ ರಕ್ಷಣೆ ಮಾಡಿ ಮನೆಯವರ ಆತಂಕ ದೂರ ಮಾಡಿದ ಘಟನೆ ಕುಮಟಾ ತಾಲೂಕಿನ ಯಲವಳ್ಳಿಯಲ್ಲಿ ನಡೆದಿದೆ. ಯಲವಳ್ಳಿಯಲ್ಲಿ ಗಣೇಶ ಭಟ್ ಎಂಬುವವರ ಮನೆಯಲ್ಲಿ ಬೆಳಂಬೆಳಗ್ಗೆ ಕಾಳಿಂಗ ಸರ್ಪವೊಂದು ಅಡುಗೆ ಕೋಣೆಯ ಮಿಕ್ಸರ್ ಗ್ರೈಂಡರ್ ಮೇಲೆ ಸುರುಳಿ ಸುತ್ತಿಕೊಂಡು ಬುಸು ಗುಡುತಿತ್ತು. ಮನೆಯವರು ಎದ್ದು ಚಹಾ ಮಾಡಲು ಅಡುಗೆ ಕೋಣೆಗೆ ಬಂದಾಗ ಹಾವು ನೋಡಿ ಹೌಹಾರಿದ್ದಾರೆ.
ಮೊದಲು ಕಪ್ಪಗಾಗಿರುವ ನೀಳವಾದ ದೇಹವನ್ನು ಕಂಡು ಕೇರೆ ಹಾವೆಂದು ತಿಳಿದು ತುಂಬಾ ಸಮೀಪದಿಂದ ಮನೆಯ ಹೊರಗೆ ಓಡಿಸಲು ಪ್ರಯತ್ನಿಸಿದಾಗ ಹಾವು ಹೆಡೆ ಬಿಚ್ಚಿದ್ದು, ಭಯಗೊಂಡಿದ್ದಾರೆ. ನಂತರ ಈ ಬಗ್ಗೆ ಉರಗ ತಜ್ಞ ಪವನ್ ನಾಯ್ಕ ಅವರಿಗೆ ತಿಳಿಸಿದ್ದು, ಅವರು ಬಂದು ಹಾವನ್ನು ರಕ್ಷಣೆ ಮಾಡಿ, ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪವು ಸುಮಾರು 10 ಅಡಿ ಉದ್ದವಾಗಿತ್ತು. ಇದರ ಸಂಪೂರ್ಣ ಕಾರ್ಯಾಚರಣೆಯನ್ನು ಗೋಪಿ ಜಾಲಿ ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ನೋಡಿ: ಅಬ್ಬಬ್ಬಾ! ಬಾತ್ರೂಮ್ನಲ್ಲಿ 35 ಹಾವಿನ ಮರಿಗಳು ಪ್ರತ್ಯಕ್ಷ- ವಿಡಿಯೋ ನೋಡಿ - Snakes Crawl Out Of Bathroom