ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ: LIVE - Assembly Session - ASSEMBLY SESSION
🎬 Watch Now: Feature Video
Published : Jul 18, 2024, 10:43 AM IST
|Updated : Jul 18, 2024, 2:07 PM IST
ಬೆಂಗಳೂರು: ಸೋಮವಾರದಿಂದ ಆರಂಭವಾದ ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಎರಡು ದಿನದ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದವು. ಇದರಿಂದ ಸದನದಲ್ಲಿ ಪ್ರತಿಪಕ್ಷ ಮತ್ತು ಸರ್ಕಾರದ ನಡುವೆ ವಾಕ್ಸಮರ ಉಂಟಾಗಿತ್ತು. ಅಧಿವೇಶನ ಆರಂಭಕ್ಕೂ ಮುನ್ನ ವಾಲ್ಮೀಕಿ ನಿಗಮದಲ್ಲಿನ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಎಂದು ಆಗ್ರಹಿಸಿ ಶಾಸಕರ ಭವನದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಕೂಡ ನಡೆಸಿದ್ದರು. ಮಂಗಳವಾರ ಕೂಡ ವಾಲ್ಮೀಕಿ ಹಗರಣ ಪ್ರತಿಧ್ವನಿಸಿತು. "ಕೊಲೆ ಮಾಡುವುದು ಎಷ್ಟು ಅಪರಾಧವೋ ಕೊಲೆ ಮಾಡುತ್ತಿರುವುದನ್ನು ನೋಡುವುದೂ ಅಷ್ಟೇ ದೊಡ್ಡ ಅಪರಾಧ. ಅಕ್ರಮದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು" ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಸದನದಲ್ಲಿ ಆಗ್ರಹಿಸಿದ್ದರು. ಇಂದೂ ಕೂಡ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ವಾಗ್ದಾಳಿ ಮುಂದುವರಿಯುವ ಸಾಧ್ಯತೆ ಇದೆ. ಜುಲೈ 26ರವರೆಗೆ ಒಟ್ಟು 9 ದಿನಗಳ ಕಾಲ ರಾಜ್ಯ ಮುಂಗಾರು ಅಧಿವೇಶನ ಇರಲಿದೆ.
Last Updated : Jul 18, 2024, 2:07 PM IST