LIVE: ಕರ್ನಾಟಕ ವಿಧಾನಸಭೆ ಕಲಾಪದ ನೇರಪ್ರಸಾರ - Assembly Session
🎬 Watch Now: Feature Video


Published : Feb 28, 2024, 11:29 AM IST
|Updated : Feb 28, 2024, 2:05 PM IST
ಬೆಂಗಳೂರು: ಫೆಬ್ರವರಿ 12ರಿಂದ ಆರಂಭವಾಗಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಇಂದು ಕೊನೆಯ ದಿನದ ಕಲಾಪ ನಡೆಯುತ್ತಿದೆ. ಫೆ. 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದರು. ವಿಧಾನಸಭೆ ಕಲಾಪ ನಡೆಯುತ್ತಿದ್ದು, ಇದರ ನೇರಪ್ರಸಾರ ವೀಕ್ಷಿಸಿ.ಕಳೆದ ಶುಕ್ರವಾರ ನಡೆದ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನವಾದಂತೆ ಆಧಿವೇಶನವನ್ನು ಫೆಬ್ರವರಿ 26 ರವರೆಗೆ ವಿಸ್ತರಿಸಲಾಗಿತ್ತು. ಆದರೆ, ಸುರಪುರ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಹೃದಯಾಘಾತದಿಂದ ಭಾನುವಾರ ನಿಧನರಾದ ಹಿನ್ನೆಲೆಯಲ್ಲಿ ಕಲಾಪವನ್ನು ಮತ್ತೊಮ್ಮೆ ಬುಧವಾರಕ್ಕೆ ಮುಂದೂಡಿಕೆ ಮಾಡಲಾಗಿತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರವನ್ನು ಇಂದು ನೀಡಲಿದ್ದಾರೆ. ಅಧಿವೇಶನವು ಪೂರ್ವ ನಿಗದಿಯಂತೆ ಅಧಿವೇಶನ ಶುಕ್ರವಾರ ಮುಗಿಯಬೇಕಾಗಿತ್ತು. ಆದರೆ ವಿಸ್ತರಣೆ ನಿರ್ಣಯದ ಹಿನ್ನೆಲೆಯಲ್ಲಿ ಕಾರ್ಯಸೂಚಿಯಲ್ಲಿನ ಪಟ್ಟಿಯಂತೆ ನಡೆಸಬೇಕಾಗಿದೆ. ಹಾಗಾಗಿ, ಎಲ್ಲ ಶಾಸಕರು ಸಹಕರಿಸಬೇಕು ಎಂದು ಸ್ಪೀಕರ್ ಖಾದರ್ ಕೋರಿದ್ದರು. ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯಬೇಕಿದ್ದು, ಇನ್ನೂ ಕೆಲವರು ಚರ್ಚೆ ನಡೆಸಬೇಕಾಗಿದೆ. ಅಲ್ಲದೆ, ಮಸೂದೆಗಳನ್ನು ಮಂಡಿಸಿ, ಪರ್ಯಾಲೋಚಿಸಿ, ಅಂಗೀಕಾರ ಪಡೆಯಬೇಕಾಗಿದೆ. ಹೀಗಾಗಿ ಒಂದು ದಿನ ಕಲಾಪವನ್ನು ವಿಸ್ತರಣೆ ಮಾಡಲಾಗಿದೆ.
Last Updated : Feb 28, 2024, 2:05 PM IST