LIVE: ಇಸ್ರೋ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್​ ಉಡಾವಣೆ - ISRO to launch SSLV D3 Live

🎬 Watch Now: Feature Video

thumbnail

By ETV Bharat Karnataka Team

Published : Aug 16, 2024, 9:19 AM IST

Updated : Aug 16, 2024, 9:47 AM IST

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಒಎಸ್-08 ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್​ ಅನ್ನು ಇಂದು ಉಡಾವಣೆ ಮಾಡಲಾಗುತ್ತಿದೆ. ಇಒಎಸ್-08 ಉಪಗ್ರಹವನ್ನು ಪರಿಸರ ವೀಕ್ಷಣೆಯನ್ನು ಇನ್ನಷ್ಟು ಸಮರ್ಥಗೊಳಿಸಲು, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ನೆರವಾಗಲು, ಜ್ವಾಲಾಮುಖಿಗಳ ಮೇಲ್ವಿಚಾರಣೆ ಮತ್ತು ಗಗನಯಾನ ಯೋಜನೆಗೆ ನೆರವಾಗಲು ನಿರ್ಮಿಸಲಾಗಿದೆ. ಸುಮಾರು 34 ಮೀಟರ್ ಎತ್ತರವಿರುವ ಅತ್ಯಂತ ಚಿಕ್ಕ SSLV ರಾಕೆಟ್ ಅನ್ನು ಆಗಸ್ಟ್ 15ರಂದು ಬೆಳಗ್ಗೆ 9.17ಕ್ಕೆ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದರೆ, ನಂತರ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್‌ನಿಂದ ಆಗಸ್ಟ್ 16ರಂದು ಬೆಳಗ್ಗೆ 9.17ಕ್ಕೆ ಉಡಾವಣೆ ಮಾಡಲು ಮರುಹೊಂದಿಸಲಾಯಿತು. 2047ರ ವೇಳೆಗೆ ಭಾರತ ರಾಕೆಟ್ ಉಡಾವಣೆಯಲ್ಲಿ ಅತ್ಯಾಧುನಿಕ ರಾಷ್ಟ್ರವಾಗಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯತ್ತ ಇಡುತ್ತಿರುವ ಹೆಜ್ಜೆ ಇದಾಗಿದೆ. ಈ ಉಪಗ್ರಹ ಇಲೆಕ್ಟ್ರೋ ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್ (ಇಒಐಆರ್), ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ - ರಿಫ್ಲೆಕ್ಟೋಮೆಟ್ರಿ (ಜಿಎನ್ಎಸ್ಎಸ್-ಆರ್) ಪೇಲೋಡ್ ಮತ್ತು ಎಸ್ಐಸಿ ಯುವಿ ಡಾಸಿಮೀಟರ್ ಎನ್ನುವ ಮೂರು ಪೇಲೋಡ್‌ಗಳನ್ನು ಒಯ್ಯುತ್ತಿದೆ. 
Last Updated : Aug 16, 2024, 9:47 AM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.