LIVE: ಅಂತಾರಾಷ್ಟ್ರೀಯ ಯೋಗ ದಿನ; ಕಾಶ್ಮೀರದಲ್ಲಿ ಪ್ರಧಾನಿ ಮೋದಿ ಯೋಗ - International Yoga day - INTERNATIONAL YOGA DAY

🎬 Watch Now: Feature Video

thumbnail

By ETV Bharat Karnataka Team

Published : Jun 21, 2024, 7:56 AM IST

Updated : Jun 21, 2024, 8:38 AM IST

ಇಂದು ಅಂತಾರಾಷ್ಟ್ರೀಯ ಯೋಗ ದಿನ. ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ. ಕಣಿವೆ ನಾಡಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷವಾಗಿ ಆಚರಿಸಲಾಗುತ್ತಿದೆ. ಯೋಗ ದಿನದ ನೇರಪ್ರಸಾರ ಇಲ್ಲಿದೆ. ಯೋಗ ದಿನವನ್ನು ವಾರ್ಷಿಕವಾಗಿ ಜೂನ್ 21ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ವಿಶ್ವಾದ್ಯಂತ ಪ್ರಾಚೀನ ಭಾರತೀಯ ಯೋಗ ಕಲೆಗೆ ಮನ್ನಣೆ ಸಿಕ್ಕಿದೆ. ನಮ್ಮ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುವ ಯೋಗವು, ಸಾಂಸ್ಕೃತಿಕ ಮತ್ತು ಭೌಗೋಳಿಕ ಅಡೆತಡೆಗಳನ್ನು ಮೀರಿದೆ. ವಿಶ್ವಾದ್ಯಂತ ಯೋಗ ತರಗತಿಗಳು, ಕಾರ್ಯಾಗಾರಗಳ ಮೂಲಕ ಈ ದಿನ ಲಕ್ಷಾಂತರ ಜನರು ಒಂದೆಡೆ ಸೇರುತ್ತಾರೆ. ಈ ಸಲದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು "ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ" ಎಂಬ ಥೀಮ್​​ನಡಿ ನಡೆಯುತ್ತಿದೆ. ವೈಯಕ್ತಿಕ ಯೋಗಕ್ಷೇಮ ಹೆಚ್ಚಿಸುವುದಲ್ಲದೆ, ಸಮಾಜ ಸುಧಾರಣೆಯನ್ನು ಇದು ಒತ್ತಿಹೇಳುತ್ತದೆ. ಭಾವನೆಗಳ ನಿಯಂತ್ರಣ, ಒತ್ತಡದ ನಿರ್ವಹಣೆ ಹಾಗೂ ಸ್ವಯಂ ಅರಿವು ಬೆಳೆಸಿಕೊಳ್ಳಲು ಕೌಶಲ್ಯಾಭಿವೃದ್ಧಿಗೆ ಯೋಗವು ಬಹಳಷ್ಟು ಪ್ರಯೋಜನಕಾರಿಯಾಗಿದೆ.
Last Updated : Jun 21, 2024, 8:38 AM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.