LIVE: ಇಸ್ರೋ ಅಧ್ಯಕ್ಷ ಡಾ. ಎಸ್ ಸೋಮನಾಥ್ ಜೊತೆ ವಸತಿ ಶಾಲಾ ಮಕ್ಕಳ ಸಂವಾದ - ISRO CHAIRMAN LIVE INTERACTION
🎬 Watch Now: Feature Video
Published : Nov 12, 2024, 12:34 PM IST
|Updated : Nov 12, 2024, 1:38 PM IST
ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಚಂದ್ರಯಾನ ಯಶಸ್ಸಿನ ರೂವಾರಿ, ಇಸ್ರೋ ಸಂಸ್ಥೆ ಅಧ್ಯಕ್ಷ ಡಾ. ಎಸ್. ಸೋಮನಾಥ್ ಅವರೊಂದಿಗೆ ವಸತಿ ಶಾಲಾ ಮಕ್ಕಳ ಸಂವಾದ ಏರ್ಪಡಿಸಿದೆ. ನಗರದ ಸುಮನಹಳ್ಳಿ ಬಳಿ ಇರುವ ಡಾ. ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆಯಲ್ಲಿ ಇಂದು ಈ ಸಂವಾದ ನಡೆಯುತ್ತಿದ್ದು, ಅದರ ನೇರಪ್ರಸಾರ ಇಲ್ಲಿದೆ. ಮಕ್ಕಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ತಿಳುವಳಿಕೆಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಈ ಸಂವಾದ ಆಯೋಜಿಸಿರುವುದಾಗಿ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಗಸ್ತ್ಯ ಪೌಂಡೇಷನ್, ಇಸ್ರೋ, ಹಿಮಾಲಯ ಸ್ಪೇಸ್ ಲ್ಯಾಬ್, ಐಐಎಪಿ, ಹ್ಯಾಂಡ್ ರೇಡಿಯೋ, ವರ್ನಾಜ್ ಪ್ಲಾನೆಟೋರಿಯಂ ಹಾಗೂ ಜೆಎನ್‌ಸಿಎಸ್‌ಆರ್ ಮತ್ತಿತರ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ವೈಜ್ಞಾನಿಕ ಅಂಶಗಳನ್ನು ಪ್ರದರ್ಶಿಸಲಿವೆ. ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಇಸ್ರೋ ಅಧ್ಯಕ್ಷ ಡಾ. ಎಸ್.ಸೋಮನಾಥ್ ಮಾತನಾಡುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅತಿಥಿಗಳಾಗಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ನೂರಾರು ಜನ ಈ ಸಂವಾದಲ್ಲಿ ಭಾಗಿಯಾಗಿದ್ದಾರೆ.
Last Updated : Nov 12, 2024, 1:38 PM IST