"ನನ್ನ ಗೆಲುವನ್ನು ಕ್ಷೇತ್ರದ ಮತದಾರರಿಗೆ ಅರ್ಪಿಸುವೆ": ಬಿ. ವೈ. ರಾಘವೇಂದ್ರ - BY Raghavendra - BY RAGHAVENDRA
🎬 Watch Now: Feature Video
Published : Jun 4, 2024, 7:53 PM IST
ಶಿವಮೊಗ್ಗ: ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಭಾರಿ ಲೋಕಸಭೆ ಪ್ರವೇಶಿಸಿದ ಬಿ.ವೈ. ರಾಘವೇಂದ್ರ ಜೊತೆ ಈಟಿವಿ ಭಾರತ ಶಿವಮೊಗ್ಗ ಪ್ರತಿನಿಧಿ ಕಿರಣ್ಕುಮಾರ್ ನಡೆಸಿದ ಕಿರು ಸಂದರ್ಶನದಲ್ಲಿ ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ.
"ನನ್ನ ಗೆಲುವಿನಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಜನ ನಮ್ಮಿಂದ ಹೆಚ್ಚಿನ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮತ ನೀಡುವ ಮೂಲಕ ಈ ಕ್ಷೇತ್ರದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮತ ಹಾಕಿದ್ದಾರೆ. ಜನರ ಗೆಲುವನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ. ಈ ಗೆಲುವನ್ನು ನನ್ನ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಸಲ್ಲಿಸಲು ಬಯಸುತ್ತೆನೆ".
"ಚುನಾವಣೆಯಲ್ಲಿ ವಿರೋಧ ಸ್ಪರ್ಧೆ, ಪ್ರಚಾರ ಹಾಗೂ ಅಪ್ರಚಾರಗಳು, ವೈಯುಕ್ತಿಕ ಟೀಕೆ ಎಲ್ಲವೂ ಸಹ ನಡೆದವು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ನಮ್ಮ ಪಕ್ಷ ನಿರ್ಧಾರ ಮಾಡಿತ್ತು. ಇದನ್ನು ಅರ್ಥ ಮಾಡಿಕೊಂಡು ಕೇಂದ್ರ ಹಾಗೂ ರಾಜ್ಯ ನಾಯಕರು ಒಟ್ಟಾಗಿ ಕೆಲಸ ಮಾಡಬೇಕಿದೆ. ಕ್ಷೇತ್ರದಲ್ಲಿ ಇನ್ನೂ ಅನೇಕ ಕಾಮಗಾರಿಗಳಿವೆ. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕ್ಷೇತ್ರ, ಪರಿಸರ ಉಳಿಸಿ ಅಭಿವೃದ್ಧಿ ಮಾಡಬೇಕಿದೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ" ಎಂದು ಹೇಳಿದರು.
ಇದನ್ನೂ ಓದಿ: ಮಲೆನಾಡಲ್ಲಿ 4ನೇ ಬಾರಿ ಅರಳಿದ ಕಮಲ: ಬಿ.ವೈ.ರಾಘವೇಂದ್ರ ಜಯಭೇರಿ - B Y Raghavendra