ಹುಬ್ಬಳ್ಳಿಯಲ್ಲಿ ಹೋಳಿ ಹುಣ್ಣಿಮೆಯ ರಂಗಪಂಚಮಿ‌ ಹಬ್ಬ; ಬಣ್ಣಗಳಲ್ಲಿ ಮಿಂದೆದ್ದ​ ಮಂದಿ - holi rangapanchami festival

🎬 Watch Now: Feature Video

thumbnail

By ETV Bharat Karnataka Team

Published : Mar 29, 2024, 4:42 PM IST

ಹುಬ್ಬಳ್ಳಿ: ಐತಿಹಾಸಿಕ ಹೋಳಿ ಹುಣ್ಣಿಮೆಯ ರಂಗಪಂಚಮಿ‌ ಹಬ್ಬದ ಸಂಭ್ರಮ ವಾಣಿಜ್ಯ ನಗರಿಯಲ್ಲಿ ಕಳೆಗಟ್ಟಿತ್ತು. ಮುಂಜಾನೆಯೇ ಕಾಮಣ್ಣನ ಮೂರ್ತಿಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಹೋಳಿ ರಂಗಪಂಚಮಿಗೆ ಚಾಲನೆ ದೊರೆಯಿತು. ಬಣ್ಣಗಳಲ್ಲೇ ಜನರು ಮಿಂದೆದಿದ್ದು ಎತ್ತ ನೋಡಿದರೂ ಕಲರ್​ ಕಲರ್​ ದೃಶ್ಯಗಳೇ ಕಾಣುತ್ತಿದ್ದವು. 

ನಗರದ ಚೆನ್ನಮ್ಮ ವೃತ್ತ, ರಾಯಣ್ಣ ವೃತ್ತ, ಕಮರಿಪೇಟೆ, ದಾಜಿಬಾನಪೇಟೆ, ಬಾನಿ ಓಣಿ, ಮ್ಯಾದಾರ ಓಣಿ, ಮರಾಠ ಗಲ್ಲಿ, ಬಮ್ಮಾಪುರ ಓಣಿ, ಹಳೇ ಹುಬ್ಬಳ್ಳಿ, ಚನ್ನಪೇಟ, ನೇಕಾರ ನಗರ, ನವನಗರ ಮತ್ತಿತರ ಪ್ರದೇಶದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ ಸಂಭ್ರಮ ಮನೆ ಮಾಡಿತ್ತು.‌

ಹುಣ್ಣಿಮೆ ದಿನದಂದು ನಗರದ ಮ್ಯಾದಾರ ಓಣಿ, ಮರಾಠ ಗಲ್ಲಿ, ಬ್ಯಾಳಿ ಓಣಿ ಇತರೆಡೆ ಒಟ್ಟು 460 ಅಧಿಕ ರತಿ - ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಕೆಲವೆಡೆ ಹುಣ್ಣಿಮೆ ದಿನದಂದೇ ಈ ಮೂರ್ತಿಗಳನ್ನು ದಹಿಸಿದರೆ, ಬಹಳಷ್ಟು ಮೂರ್ತಿಗಳನ್ನು ರಂಗಪಂಚಮಿ ದಿನದಂದು ಮೆರವಣಿಗೆ ನಡೆಸಿ ನಂತರ ದಹಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಬಹಳಷ್ಟು ಕಡೆ ಬಣ್ಣದ ಗಡಿಗೆಗಳನ್ನು ಒಡೆದು ಖುಷಿಪಟ್ಟರು.

ಇದಕ್ಕೆ ‌ಪೊಲೀಸರು ಕೂಡ ಹೊರತಾಗಿರಲಿಲ್ಲ. ನಗರದ ದುರ್ಗದ ಬೈಲ್ ಸರ್ಕಲ್​ನಲ್ಲಿ‌ ಪೊಲೀಸರು ಎಲ್ಲಾ ಜಂಜಾಟಗಳನ್ನು ಬದಿಗಿಟ್ಟು ಹೋಳಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪೊಲೀಸ್ ಸಬ್​ ಇನ್​ಸ್ಪೆಕ್ಟರ್​ರೊಬ್ಬರು ಹಲಗೆ ಬಾರಿಸಿ ವಿನೂತನವಾಗಿ ಹೋಳಿ ಹಬ್ಬಕ್ಕೆ ಮೆರಗು ತುಂಬಿದರು.

ಯುವಕ ಯುತಿಯರು ನಗರದ ವಿವಿಧ ಪ್ರದೇಶದಲ್ಲಿ ಡಿಜೆ ಹಾಡುಗಳಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಒಟ್ಟಾರೆ ತಮ್ಮ ಆತ್ಮೀಯರಿಗೆ ಬಣ್ಣ ಹಚ್ಚುವ ಮೂಲಕ ಯುವ ಸಮುದಾಯ ರಂಗಪಂಚಮಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ: ಬಣ್ಣದಲ್ಲಿ ಮಿಂದೆದ್ದು ಸಂಭ್ರಮದಲ್ಲಿ ತೇಲಿದ ಶಿವಮೊಗ್ಗ ಜನತೆ - holi festival in shivamogga

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.