ಮಂಜೊಳಗೆ ಬೆಟ್ಟವೋ..ಬೆಟ್ಟದೊಳಗೆ ಮಂಜೋ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ದೃಶ್ಯ ಕಾವ್ಯ - Himavad Gopalaswamy hill - HIMAVAD GOPALASWAMY HILL

🎬 Watch Now: Feature Video

thumbnail

By ETV Bharat Karnataka Team

Published : Jul 15, 2024, 2:31 PM IST

ಚಾಮರಾಜನಗರ: ಮಾನ್ಸೂನ್​​ ಮಳೆ ನಡುವೆ ಹಿಮ ಆಸ್ವಾದಿಸಲು, ಆಧ್ಯಾತ್ಮಿಕತೆಯಲ್ಲಿ ಮಿಂದೇಳಲು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕಿಂತ ಮತ್ತೊಂದು ಯಾತ್ರಾಸ್ಥಳ ರಾಜ್ಯದಲ್ಲಿ ಇಲ್ಲ. ಹೌದು.. ಗುಂಡ್ಲುಪೇಟೆ ತಾಲೂಕಿನ ಹಿಮವದ್​ ಗೋಪಾಲಸ್ವಾಮಿ ಬೆಟ್ಟದಲ್ಲಿ ಮುಂಗಾರಿನ ಅವಧಿ ಮತ್ತಷ್ಟು ಮಂಜು ಹೊತ್ತು ತರುತ್ತಿದ್ದು ಹಿಮಾಚ್ಛಾದಿತ ಬೆಟ್ಟಕ್ಕೆ ಭಕ್ತರು, ಪ್ರವಾಸಿಗರು ಮನ ಸೋಲುತ್ತಿದ್ದಾರೆ. 

ಬೆಟ್ಟದಲ್ಲಿ ತುಂತುರು ಮಳೆ ಆಗಾಗ್ಗೆ ಆಗುತ್ತಿದ್ದು, ಸದಾ ಬೆಟ್ಟವಲ್ಲದೇ ಸುತ್ತಮುತ್ತಲ ಪರಿಸರ ಮಂಜಿನಿಂದ ತುಂಬಿದ್ದು ಕಣ್ತುಂಬಿಕೊಳ್ಳಬಹುದಾಗಿದೆ. ಮಧ್ಯಾಹ್ನ 12 ಗಂಟೆ ಆದರೂ ಮುಂಜಾನೆ 6 ರಂತೆ ಪರಿಸರ ಗೋಚರಿಸುತ್ತಿದೆ. ಪ್ರವಾಸಿಗರಿಗೆ ಗುಂಡ್ಲುಪೇಟೆ ಮತ್ತು ಬೆಟ್ಟದ ತಪ್ಪಲಿನಿಂದ ಬಸ್ ಸೌಕರ್ಯವಿದ್ದು, ವಾರಾಂತ್ಯದಲ್ಲಿ ಹೆಚ್ಚುವರಿ ಬಸ್​ಗಳು ಕೂಡ ಸಂಚರಿಸಲಿದೆ. ಗೋಪಾಲಸ್ವಾಮಿ ಹತ್ತಾರು ಊರುಗಳ ಆರಾಧ್ಯ ದೈವವಾಗಿದ್ದು ಆಧ್ಯಾತ್ಮಿಕ ನೆಲೆಗಟ್ಟಿನಲ್ಲೂ ಈ ದೇವಾಲಯ ಪುರಾಣ ಪ್ರಸಿದ್ಧವಾಗಿದೆ.

ಪ್ರವಾಸಿಗರೇ ಎಚ್ಚರ: ಬೆಟ್ಟ ಹತ್ತುವಾಗ ಚಿರತೆ, ಹುಲಿ ದರ್ಶನವೂ ಆಗುವ ಸಾಧ್ಯತೆ ಇದೆ. ಮಕ್ಕಳೊಂದಿಗೆ ತೆರಳುವಾಗ ಜಾಗೃತೆವಹಿಸಿ.

ಇದನ್ನೂ ಓದಿ: ಕಾರವಾರದಲ್ಲಿ ವ್ಯಾಪಕ ಮಳೆ: ಕೃತಕ ನೆರೆಗೆ ಮುಳುಗಿದ ಇಡೂರು ಗ್ರಾಮ! - Heavy Rain in Karwar

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.