ಸಂಸದ ಡಿ.ಕೆ ಸುರೇಶ್ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಸುಂಟರಗಾಳಿ ಅಡ್ಡಿ, ಚೆಲ್ಲಾಪಿಲ್ಲಿಯಾದ ಪೆಂಡಲ್ - ವಿಡಿಯೋ - DK Suresh
🎬 Watch Now: Feature Video
Published : Feb 18, 2024, 5:27 PM IST
ತುಮಕೂರು : ಜಿಲ್ಲೆಯ ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಸಂಸದ ಡಿಕೆ ಸುರೇಶ್ ಅವರು ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಾರೀ ಪ್ರಮಾಣದ ಸುಂಟರಗಾಳಿ ಅಡ್ಡಿಯಾಯಿತು. ಸುಂಟರಗಾಳಿ ಬೀಸಿದ ರಭಸಕ್ಕೆ ಚೆಲ್ಲಾಪಿಲ್ಲಿಯಾದ ಪೆಂಡಲ್ ಭಾನೆತ್ತರಕ್ಕೆ ಹಾರಿತ್ತು. ಇದನ್ನು ಕಂಡ ಜನರು ಕೆಲಕಾಲ ಗಾಬರಿಗೊಂಡರು.
ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿ ಉದ್ಯೋಗ ಮೇಳ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆ ಡಿ. ಕೆ ಸುರೇಶ್, ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಸೇರಿದಂತೆ, ಸುಮಾರು 2 ಸಾವಿರಕ್ಕಿಂತ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು. ಅಚ್ಚುಕಟ್ಟಾಗಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಇದ್ದಕ್ಕಿದಂತೆ ಸುಂಟರಗಾಳಿ ಬೀಸಿತು. ಇದರ ಪರಿಣಾಮ ಪೆಂಡಲ್ ಹಾಕಲು ನೆಟ್ಟಿದ್ದ ಕಂಬಗಳನ್ನು ಹಿಡಿದು ಜನರು ನಿಂತುಕೊಂಡರೆ, ಸುಂಟರಗಾಳಿ ಬೀಸಿದ ರಭಸಕ್ಕೆ ಪೆಂಡಲ್ ಕಿತ್ತು ಬಂದಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಇದನ್ನೂ ಓದಿ : ದಾವಣಗೆರೆ: ಅಡಿಕೆ, ಬಾಳೆ ತೋಟಕ್ಕೆ ಕೊಳ್ಳಿ ಇಟ್ಟ ಕೀಚಕರು; ಸುಟ್ಟು ಕರಕಲಾದ ಫಸಲು ಕಂಡು ರೈತ ಕಂಗಾಲು