ಜಮ್ಮು: ಭಾರತ ಮತ್ತು ಪಾಕಿಸ್ತಾನ ಧ್ವಜ ಸಭೆ ನಡೆಸಲು ಮುಂದಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ಸೇರಿದಂತೆ ಕದನ ವಿರಾಮ ಉಲ್ಲಂಘನೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲಿದೆ ಎಂದು ಮೂಲಗಳು ಹೇಳಿದೆ.
ಬ್ರಿಗೇಡಿಯರ್ ಮಟ್ಟದ ಅಧಿಕಾರಿಗಳು ಈ ಧ್ವಜ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆ ಕುರಿತು ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದ್ದು, ಎಲ್‌ಒಸಿ ಬಳಿ ಈ ಸಭೆ ನಡೆಯಲಿದೆ.
ಗಡಿ ನಿಯಂತ್ರಣ ರೇಖೆ ಬಳಿಕ ಚಟುವಟಿಕೆಗಳು ಹೆಚ್ಚಿರುವ ಪರಿಣಾಮವಾಗಿ ಈ ಸಭೆ ನಡೆಯಲಿದೆ. ಸಭೆಯಲ್ಲಿ ಫೆ. 11ರಂದು ಜಮ್ಮು ಪ್ರದೇಶದ ಅಖ್ನೋರ್ ವಲಯದಲ್ಲಿ ಶಂಕಿತ ಉಗ್ರರು ನಡೆಸಿದ ಐಇಡಿ ಸ್ಪೋಟದಲ್ಲಿ ಕ್ಯಾಪ್ಟನ್ ಸೇರಿದಂತೆ ಇಬ್ಬರು ಸೇನಾ ಸಿಬ್ಬಂದಿಗಳ ಹತ್ಯೆ ವಿಚಾರವೂ ಚರ್ಚೆಯಾಗಲಿದೆ ಎನ್ನಲಾಗಿದೆ.
2021ರಲ್ಲಿ ಘೋಷಣೆಯಾಗಿದ್ದ ಕದನ ವಿರಾಮ ಒಪ್ಪಂದ: 2021ರಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳು ಕದನ ವಿರಾಮವನ್ನು ಘೋಷಿಸಿದವು. ಈ ಕದನ ವಿರಾಮ ಒಪ್ಪಂದದಿಂದಾಗಿ, ಎಲ್‌ಒಸಿ ಮೇಲಿನ ಉದ್ವಿಗ್ನತೆ ಗಮನಾರ್ಹವಾಗಿ ಕಡಿಮೆಯಾಗಿತ್ತು. ಅಷ್ಟೇ ಅಲ್ಲ ಗಡಿಯ ಎರಡು ಬದಿಗಳಲ್ಲಿ ವಾಸಿಸುವ ನೂರಾರು ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವು.
ಇತ್ತೀಚೆಗೆ ಪೂಂಚ್ ಮತ್ತು ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿನ ಅಪ್ರಚೋದಿತ ದಾಳಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿಗಳು ಗಾಯಗೊಂಡಿದ್ದರು. ಈ ವೇಳೆ ಭಾರತೀಯ ಸೇನೆ ನಡೆಸಿದ ಆಕ್ರಮಣಕಾರಿ ದಾಳಿಗೆ ಪಾಕಿಸ್ತಾನದ ಸೇನೆ ಹೆಚ್ಚಿನ ಅಪಾಯವನ್ನು ಎದುರಿಸಿದೆ.
ಗುಪ್ತಚರ ವರದಿ ಪ್ರಕಾರ, ಚಳಿಗಾಲದಲ್ಲಿ ಭಾರಿ ಹಿಮಪಾತದ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ಸಾಂಪ್ರದಾಯಿಕ ಒಳನುಸುಳಿವಿಕೆ ಮಾರ್ಗದ ಮೂಲಕ ಭಾರತದ ಗಡಿ ನಿಯಂತ್ರಣ ಭಾಗದಲ್ಲಿ ಅಕ್ರಮವಾಗಿ ಪ್ರವೇಶ ಕಂಡು ಬಂದಿದೆ.
ಜಮ್ಮು ಕಾಶ್ಮೀರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎರಡು ಪರಿಶೀಲನಾ ಸಭೆಗಳು ನಡೆದಿವೆ. ಈ ಸಭೆಯಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವಂತೆ ಅವರು ಭದ್ರತಾ ಪಡೆಗಳಿಗೆ ಖಡಕ್ ಸೂಚನೆ ನೀಡಿದ್ದರು. (ಪಿಟಿಐ/ ಐಎಎನ್ಎಸ್)
ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರಿಗೆ ಲಾರಿ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಪಾರು
ಇದನ್ನೂ ಓದಿ: 21 ಜನರನ್ನು ಬಲಿ ಪಡೆದಿದ್ದ ಹತ್ರಾಸ್ ಕಾಲ್ತುಳಿತ ಘಟನೆ; ಭೋಲೆ ಬಾಬಾಗೆ ಕ್ಲೀನ್ ಚಿಟ್