ಹಾವೇರಿಯಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಕೈಗೊಂಡ ಯುವಕ - Solo Cycle Yatre - SOLO CYCLE YATRE

🎬 Watch Now: Feature Video

thumbnail

By ETV Bharat Karnataka Team

Published : May 29, 2024, 9:51 AM IST

ಮೈಸೂರು: ಹಾದಿ ತಪ್ಪುತ್ತಿರುವ ಯುವ ಸಮುದಾಯ ಸತ್ಪ್ರಜೆಗಳಾಗಬೇಕು ಎಂದು ಜಾಗೃತಿ ಮೂಡಿಸಲು ವಿವೇಕಾನಂದ ಇಂಡಳಗಿ ಎಂಬ ಯುವಕ ಹಾವೇರಿಯಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಮೇ 10ರ ಬಸವ ಜಯಂತಿ ದಿನ ಇವರ ಯಾತ್ರೆ ಆರಂಭವಾಗಿತ್ತು. 

ಈ ಪಯಣದುದ್ದಕ್ಕೂ ಶಾಲೆ, ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಇವರು, ಪರಿಸರ ಸಂರಕ್ಷಣೆ, ನೈತಿಕತೆ, ಮದ್ಯವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 

25 ದಿನಗಳ ಪಯಣ: ಕನ್ಯಾಕುಮಾರಿ ತಲುಪಲು 25 ದಿನಗಳು ಬೇಕಿದ್ದು ಪ್ರತೀದಿನ 100 ಕಿ.ಮೀ ಪ್ರಯಾಣಿಸುತ್ತಿದ್ದಾರೆ. ಈಗಾಗಲೇ ಹದಿನೈದು ದಿನಗಳ ಯಾತ್ರೆ ಮುಗಿಸಿದ್ದಾರೆ. ಸ್ವಾಮಿ ವಿವೇಕಾನಂದರ ಹೆಸರಿಟ್ಟುಕೊಂಡು ವಿವೇಕಾನಂದ ತತ್ವಗಳನ್ನು ಮೈಗೂಡಿಸಿಕೊಂಡಿರುವ ಈ ಯುವಕನಿಗೆ ಇದು ಎರಡನೇ ಯಾತ್ರೆ. ಇದಕ್ಕೂ ಮೊದಲು ಹಾವೇರಿಯಿಂದ ಕೇದಾರನಾಥಕ್ಕೆ ಸೈಕಲ್ ಯಾತ್ರೆ ಮಾಡಿದ್ದರು. 

ಎರಡನೇ ಯಾತ್ರೆಯ ಭಾಗವಾಗಿ ಮಂಗಳವಾರ ಮೈಸೂರಿಗೆ ಆಗಮಿಸಿ, ಕೆಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ಬಳಿಕ ಚಾಮರಾಜನಗರದತ್ತ ಪ್ರಯಾಣಿಸಿದ್ದು ಕೊಯಮತ್ತೂರು, ಮಧುರೈ, ಮೀನಾಕ್ಷಿ, ರಾಮೇಶ್ವರಂ ಮೂಲಕ ಕನ್ಯಾಕುಮಾರಿ ತಲುಪಲಿದ್ದಾರೆ.

ಇದನ್ನೂಓದಿ: ಒಂದೇ ಕುಟುಂಬದಲ್ಲಿ 110 ಮತದಾರರು: ಮನ ಗೆಲ್ಲಲು ಮನೆಯ ಸುತ್ತಲೂ ರಾಜಕಾರಣಿಗಳ ಗಿರಕಿ! - 110 Voters in One Family

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.