ಗೋಡಾನ್ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ: ವಿಡಿಯೋ - Godan Express Bogies caught fire - GODAN EXPRESS BOGIES CAUGHT FIRE
🎬 Watch Now: Feature Video
Published : Mar 22, 2024, 9:13 PM IST
ನಾಸಿಕ್(ಮಹಾರಾಷ್ಟ್ರ): ಗೋಡಾನ್ ಎಕ್ಸ್ಪ್ರೆಸ್ನ ಎರಡು ಬೋಗಿಗಳಿಗೆ ಇಂದು ಮಧ್ಯಾಹ್ನ ಬೆಂಕಿ ತಗುಲಿದ ಘಟನೆ ನಾಸಿಕ್ ರೋಡ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ರೈಲು ಮುಂಬೈನಿಂದ ಗೋರಖ್‌ಪುರಕ್ಕೆ ಪ್ರಯಾಣಿಸುತ್ತಿತ್ತು. ರೈಲು ಮುಂಬೈನಿಂದ ಹೊರಟು ನಾಸಿಕ್ ರಸ್ತೆ ನಿಲ್ದಾಣ ತಲುಪಿತ್ತು. ಇದೇ ವೇಳೆ ಗೋಡಾನ್ ಎಕ್ಸ್ ಪ್ರೆಸ್ನ ಕೊನೆಯ ಲಗೇಜ್ ಕ್ಯಾರೇಜ್ ಬೋಗಿಗಳಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಮುಂಜಾಗ್ರತಾ ಕ್ರಮವಾಗಿ ರೈಲನ್ನು ಬೆಂಕಿ ತಗುಲಿದ ಬೋಗಿಗಳಿಂದ ಬೇರ್ಪಡಿಸಲಾಗಿದೆ.
ಹೋಳಿ ಹಬ್ಬದ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿದ ಪ್ರಯಾಣಿಕರು ಆತಂಕಗೊಂಡಿದ್ದರು. ಆದರೆ, ಈ ಘಟನೆಯಲ್ಲಿ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಒಂದು ವೇಳೆ, ಪ್ರಯಾಣಿಕರ ಬೋಗಿಗಳಿಗೆ ಬೆಂಕಿ ತಗುಲಿದ್ದರೆ ಭಾರೀ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ರೈಲ್ವೆ ಅಧಿಕಾರಿಗಳು ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಅಗ್ನಿ ಅವಘಡ; ತಪ್ಪಿದ ಭಾರಿ ದುರಂತ - Fire In Sub Registrar Office