ಮೈಸೂರು ರಾಜಮನೆತನದ ಕಾರುಗಳಲ್ಲಿ 'ಗಂಡಭೇರುಂಡ', '1953' ಸಂಖ್ಯೆ ಏಕಿದೆ? ಕುತೂಹಲದ ಸಂಗತಿ - GANDABERUNDA EMBLEM
🎬 Watch Now: Feature Video
Published : Oct 11, 2024, 6:26 PM IST
ಮೈಸೂರು: ಮೈಸೂರು ರಾಜವಂಶಸ್ಥರ ದುಬಾರಿ ಬೆಲೆಯ ಕಾರುಗಳಿಗೆ ಇಂದು ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಆಯುಧ ಪೂಜೆ ನೆರವೇರಿಸಿದರು. ಈ ಎಲ್ಲ ಕಾರುಗಳಲ್ಲಿ ರಾಜಲಾಂಛನವಾಗಿ ಗಂಡ ಭೇರುಂಡ ಹಾಗೂ ನಂಬರ್ 1953 ಇರಲು ಕಾರಣವೇನು? ಎಂಬ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ.
ರಾಜಾಡಳಿತ ಚಿಹ್ನೆ ಗಂಡಭೇರುಂಡ. ಈ ಚಿಹ್ನೆ ರಾಜಪ್ರಭುತ್ವ ಕೊನೆಗೊಂಡ ನಂತರವೂ ಬಳಸಬಹುದಾದ ಅವಕಾಶವಿರುವುದು ರಾಜಮನೆತನಕ್ಕೆ ಮಾತ್ರ. ಈಗ ರಾಜ್ಯದ ಸಂವಿಧಾನದ ಮುಖ್ಯಸ್ಥರಾದ ರಾಜ್ಯಪಾಲರು ತಮ್ಮ ವಾಹನಗಳಿಗೆ ಗಂಡ ಭೇರುಂಡ ಚಿಹ್ನೆ ಬಳಸುತ್ತಾರೆ. ಇದರ ಜೊತೆಗೆ ರಾಜರು ತಮ್ಮ ಜೀವಿತಾವಧಿಯವರೆಗೂ ವಾಹನಗಳಿಗೆ ಗಂಡಭೇರುಂಡ ಚಿಹ್ನೆ ಬಳಸಬಹುದು. ಆದ್ದರಿಂದ ಇಂದಿಗೂ ಮೈಸೂರು ರಾಜವಂಶಸ್ಥರ ಕಾರುಗಳಲ್ಲಿ ಗಂಡ ಭೇರುಂಡ ಚಿಹ್ನೆ ಇದೆ.
ಮೈಸೂರಿನ ರಾಜವಂಶಸ್ಥರಾದ ದಿವಗಂತ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಅವರ ಜನ್ಮ ದಿನಾಂಕ 1953. ಹೀಗಾಗಿ ಅವರು ರಾಜವಂಶಸ್ಥರಾದ್ದರಿಂದ ಜನಿಸಿ ವರ್ಷದ ನೆನಪಿಗಾಗಿ ಇಂದಿಗೂ ಸಹ ಎಲ್ಲ ವಾಹನಗಳಿಗೆ 1953 ಸಂಖ್ಯೆಯನ್ನೇ ಬಳಸುತ್ತಿರುವುದು ವಿಶೇಷ.
ಇದನ್ನೂ ಓದಿ: ಮೈಸೂರು: ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧಪೂಜೆ ನೆರವೇರಿಸಿದ ಯದುವೀರ್