Watch video: ಘಟಪ್ರಭಾ ನದಿ ಅಬ್ಬರಕ್ಕೆ ಬಾಗಲಕೋಟೆಯಲ್ಲಿ ಪ್ರವಾಹ - Flood in Bagalkote - FLOOD IN BAGALKOTE

🎬 Watch Now: Feature Video

thumbnail

By ETV Bharat Karnataka Team

Published : Aug 1, 2024, 11:05 AM IST

ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ ನದಿಯ ಪ್ರವಾಹದಿಂದಾಗಿ ಮುಧೋಳ ತಾಲೂಕಿನ ಮಳಲಿ ಗ್ರಾಮಕ್ಕೆ ಜಲದಿಗ್ಭಂದನವಾಗಿದೆ. ಗ್ರಾಮದ ಪಕ್ಕದಲ್ಲೇ ನದಿ  ಹರಿಯುತ್ತಿರುವುದರಿಂದ ನೀರು ನುಗ್ಗಿ, ಮನೆ, ಕಟ್ಟಡ, ಕಚೇರಿ ಸೇರಿದಂತೆ, ಬೆಳೆಗಳು ನಾಶವಾಗಿದೆ. ಅಂಚೆ ಕಚೇರಿ, ಪಶು ಆಸ್ಪತ್ರೆ, ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಸರಕಾರಿ ಶಾಲೆ ಸೇರಿದಂತೆ ಇತರ ಕಟ್ಟಡಗಳು ಜಲಾವೃತಗೊಂಡಿವೆ. 

ಘಟಪ್ರಭಾ ನದಿಗೆ 80 ಸಾವಿರ ಕ್ಯೂಸೆಕ್​​ ನೀರು ಬಿಡುಗಡೆ ಆಗಿದೆ. ಇದರಿಂದ ಸುಮಾರು 200 ಮನೆಗಳು, ನೂರಾರು ಎಕರೆ ಪ್ರದೇಶ ಹಾನಿಯಾಗಿದೆ. ಕಳೆದ ನಾಲ್ಕು ಭಾರಿ ಪ್ರವಾಹಕ್ಕೆ ಒಳಗಾಗಿದ್ದರೂ ಶಾಶ್ವತ ಪರಿಹಾರ ಸಿಗದೇ ಸ್ಥಳೀಯರು ಈ ಬಾರಿಯ ಪರಿಸ್ಥಿತಿ ನೋಡಿ ಪರದಾಡುತ್ತಿದ್ದಾರೆ. ಸದ್ಯ ಕಳೆದ ಎರಡು ದಿನಗಳಿಂದ ಮಳೆ ಕಡಿಮೆ ಆಗಿದ್ದು, ಪ್ರವಾಹದ ನೀರು ನಿಧಾನಕ್ಕೆ ಹಿಂದಕ್ಕೆ ಸರಿಯುತ್ತಿದೆ. ಮಳೆಯಿಂದ ನಷ್ಟ ಅನುಭವಿಸುತ್ತಿರುವ ಸಂತ್ರಸ್ತರು ಶಾಶ್ವತ ಪರಿಹಾರ ಕಲ್ಪಿಸಿ ಕೂಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ತುಂಗಭದ್ರೆಯಿಂದ ಸೇತುವೆಗಳು ಜಲಾವೃತ: ಗ್ರಾಮಗಳ ಸಂಪರ್ಕ ಕಡಿತ - bridge is flooded

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.