Watch: ಕಾರ್ ಶೋರೂಂ ಆವರಣದಲ್ಲಿ ಅಗ್ನಿ ಅವಘಡ; ವಾಹನಗಳು ಸುಟ್ಟು ಭಸ್ಮ - Fire at Car Showroom - FIRE AT CAR SHOWROOM

🎬 Watch Now: Feature Video

thumbnail

By ETV Bharat Karnataka Team

Published : Jun 18, 2024, 1:56 PM IST

ಹಲ್ದ್ವಾನಿ (ಉತ್ತರಾಖಂಡ): ಇಂದು ಬೆಳಗ್ಗೆ ಬರೇಲಿ ಹೆದ್ದಾರಿಯ ಗೊರಪದವ್‌ನಲ್ಲಿರುವ ಕಾರ್ ಶೋರೂಂ ಆವರಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕಾಂಪ್ಲೆಕ್ಸ್‌ನಲ್ಲಿ ನಿಲ್ಲಿಸಿದ್ದ ಮೂರು ಕಾರುಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. 

ಕೆಲ ಹೊತ್ತಿನಲ್ಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ, ಅಗ್ನಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ನೌಕರರು ಸೂಕ್ತ ಸಮಯಕ್ಕೆ ಕಾರುಗಳನ್ನು ಅಲ್ಲಿಂದ ದೂರ ಸರಿಸಿ, ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ. ಒಂದು ವೇಳೆ ನೌಕರರು ಅಲ್ಲಿಂದ ಓಡಿ ಹೋಗಿದ್ದರೆ, ಈ ಅಗ್ನಿ ಅವಘಡ ತೀವ್ರ ಸ್ವರೂಪ ಪಡೆದು ಶೋರೂಂಗೆ ದೊಡ್ಡ ನಷ್ಟವಾಗುವ ಸಾಧ್ಯತೆಯಿತ್ತು. ದುರಂತದ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಶೋರೂಂ ಹಿಂಭಾಗದಲ್ಲಿರುವ ಅಂಗಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಿಪೇರಿಗಾಗಿ ಯಾರ್ಡ್‌ಗೆ ಬಂದಿದ್ದವು. ಮೂರು ವಾಹನಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಕೆಲಹೊತ್ತು ಶೋರೂಂ ಆವರಣ ಹಾಗೂ ಸುತ್ತಮುತ್ತ ಹೊಗೆ ಆವರಿಸಿತ್ತು.  

ಇದನ್ನೂ ಓದಿ: ವಿಮಾನ ಟೇಕ್​​ ಆಫ್​​ ಆದ ಕೆಲ ನಿಮಿಷಗಳಲ್ಲೇ ಬೆಂಕಿ: ಆ ಹಕ್ಕಿಯೇ ಇಷ್ಟಕ್ಕೆಲ್ಲಾ ಕಾರಣವಾ?

ಅಗ್ನಿಶಾಮಕ ಅಧಿಕಾರಿ ಹಲ್ದ್ವಾನಿ ಮಣಿಂದರ್ ಪಾಲ್ ಸಿಂಗ್ ಮಾತನಾಡಿ, ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಬೆಂಕಿಯನ್ನು ಹತೋಟಿಗೆ ತಂದರು. ಮೂರು ವಾಹನಗಳು ಸುಟ್ಟು ಭಸ್ಮವಾಗಿವೆ. ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯ ಆಗಿರುವ ಹಾನಿಯ ಪ್ರಮಾಣವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.