ಇಡಿ ದಾಳಿ ಹಾಗೂ ವಿಚಾರಣೆ ಕುರಿತು ನಾನು ಉತ್ತರ ನೀಡುವುದಿಲ್ಲ: ಸಚಿವ ಕೆ ಜೆ ಜಾರ್ಜ್ - valmiki nigama scam - VALMIKI NIGAMA SCAM
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/10-07-2024/640-480-21916628-thumbnail-16x9-sanjuuu.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jul 10, 2024, 5:56 PM IST
ರಾಯಚೂರು : ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿರುವ ದಾಳಿ ಹಾಗೂ ವಿಚಾರಣೆ ಕುರಿತು ನಾನು ಉತ್ತರ ನೀಡುವುದಿಲ್ಲ ಎಂದು ಇಂಧನ ಖಾತೆ ಸಚಿವ ಕೆ. ಜೆ ಜಾರ್ಜ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ 187 ಕೋಟಿ ಹಗರಣದ ಹಿನ್ನೆಲೆ ಇಡಿ ಅಧಿಕಾರಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಇದಕ್ಕೆ ನಾನು ಉತ್ತರ ಕೊಡುವುದಿಲ್ಲ. ಹಿಂದೆ ನಾನು ಗೃಹ ಸಚಿವನಾಗಿರುವಾಗ, ಐಎಎಸ್ ಅಧಿಕಾರಿ ಡಿ.ಕೆ ರವಿ ಆತ್ಮಹತ್ಯೆ ವಿಚಾರದಲ್ಲಿ ಹಿಂದೆ ನನ್ನ ಹೊಣೆ ಮಾಡಿದ್ರು. ತನಿಖೆಯನ್ನು ನಾನು ಎದುರಿಸಿದ್ದಲ್ವಾ. ಆ ಮೇಲೆ ಸಿಬಿಐ ವರದಿ ಏನು ಕೊಟ್ಟಿದೆ ಗೊತ್ತಿದೆ. ನಾಗೇಂದ್ರ ಅವರು ತಪ್ಪಿತಸ್ಥ ಅಂತ ಈಗಲೇ ಹೇಗೆ ಹೇಳ್ತಿರಾ?. ಆ ವಿಚಾರದಲ್ಲಿ ವಿಚಾರಣೆ ಆಗ್ತಿದೆ. ಇಲಾಖೆಯವರು ಏನು ಮಾಡ್ತಾರೆ, ಅದಕ್ಕೆಲ್ಲಾ ನಾವು ಕೈ ಹಾಕಬಾರದು ಎಂದರು.
ನಾವು ನೀವು ಕೂತು ತೀರ್ಮಾನ ಮಾಡಲಾಗುತ್ತಾ?. ವಿಚಾರಣೆ ಮುಗಿದು ಚಾರ್ಜ್ ಶೀಟ್ ಸಲ್ಲಿಸಿದ ಮೇಲೆ ಗೃಹಮಂತ್ರಿಗಳು ಉತ್ತರ ಕೊಡುತ್ತಾರೆ. ನಾನು ಇಂಧನ ಸಚಿವ. ನಾನು ಅದರಲ್ಲಿ ಇದ್ದೇನಾ, ವಿಚಾರಣೆ ವೇಳೆ ನಮ್ಮ ಗೃಹಮಂತ್ರಿಗಳು ಮಧ್ಯ ಪ್ರವೇಶ ಮಾಡೋಕೆ ಬರೋಲ್ಲ. ಕಾನೂನಾತ್ಮಕ ವಿಚಾರಗಳು ನಮಗೆ ಗೊತ್ತಾಗಲ್ಲ ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ದುರುಪಯೋಗ ಮಾಡಿಕೊಂಡಿದ್ದಾರೆ ಅಂದಾಗ ಇಡಿ ಅವರು ಬರಲು ಅವಕಾಶ ಇದೆ. ಈ ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರ ಇಲ್ಲ. ಎಸ್ಐಟಿ ಈಗಾಗಲೆ ತನಿಖೆ ನಡೆಸ್ತಿದೆ, ನಮಗ್ಯಾಕೆ ಮುಜುಗರ. ವರದಿ ಬಂದ ನಂತರ ಭಾಗಿಯಾದವರ ಮೇಲೆ ಕ್ರಮ ಆಗುತ್ತೆ ಎಂದು ಹೇಳಿದರು.
ಇದನ್ನೂ ಓದಿ : ವಾಲ್ಮೀಕಿ ನಿಗಮ ಅಕ್ರಮ: ಮಾಜಿ ಸಚಿವ ಬಿ.ನಾಗೇಂದ್ರ, ಬಸವನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿ.. ಮೂವರು ವಶಕ್ಕೆ - Valmiki Nigam Scam