ಸಿಕ್ಕ ವಸ್ತುಗಳನ್ನೇ ಬಳಸಿ ಮಂಗಳೂರು ಏರ್ಪೋರ್ಟ್ನಲ್ಲಿ ಶಿವಮಣಿ ತಾಳವಾದ್ಯ - Shivamani - SHIVAMANI
🎬 Watch Now: Feature Video
Published : Mar 27, 2024, 4:43 PM IST
ಮಂಗಳೂರು (ದಕ್ಷಿಣ ಕನ್ನಡ): ಜನಪ್ರಿಯ ಡ್ರಮ್ಸ್ ಶಿವಮಣಿ ಅವರ ತಾಳವಾದ್ಯದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೈಗೆ ಸಿಕ್ಕ ಪರಿಕರಗಳನ್ನೇ ಬಳಸಿ ವಾದ್ಯ ನುಡಿಸಿ ಸ್ಥಳದಲ್ಲಿದ್ದವರನ್ನು ರಂಜಿಸಿದರು.
ಶಿವಮಣಿ ಅವರು ಇಂದು ಮುಂಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಉಡುಪಿಯಲ್ಲಿದ್ದ ಶಿವಮಣಿ ಅವರು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದರು. ನಂತರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈಗೆ ತೆರಳುವ ಸಲುವಾಗಿ ಏರ್ಪೋರ್ಟ್ಗೆ ಬಂದಿದ್ದರು. ಅಲ್ಲಿ ಕೈಗೆ ಸಿಕ್ಕ ಪರಿಕರಗಳಿಂದಲೇ ನಾದ ಹೊಮ್ಮುವಂತೆ ಮಾಡಿದ್ದಾರೆ.
ಇದನ್ನೂ ಓದಿ: ನಟ ರಾಮ್ ಚರಣ್ ಜನ್ಮದಿನ: ಪತ್ನಿ, ಪುತ್ರಿಯೊಂದಿಗೆ ತಿರುಪತಿ ದೇಗುಲಕ್ಕೆ ಭೇಟಿ - Ram Charan
ಶಿವಮಣಿ ಅವರನ್ನು ಕಂಡ ಅಭಿಮಾನಿಯೊಬ್ಬರು ತಾಳವಾದ್ಯ ನುಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಭಿಮಾನಿಯ ವಿನಂತಿಗೆ ಸ್ಪಂದಿಸಿದ ಅವರು, ಸ್ಥಳದಲ್ಲಿದ್ದ ಟಿಶ್ಶು ಪೇಪರ್ ಬಾಕ್ಸ್ ಹಾಗೂ ತಾಮ್ರದ ಟ್ರೇ ಅನ್ನೇ ಬಡಿದು ನಾದ ಸೃಷ್ಟಿಸಿದ್ದಾರೆ. ಆ ಬಳಿಕ ಮುಂಬೈಗೆ ಪ್ರಯಾಣ ಬೆಳೆಸಿದರು.
ಇದನ್ನೂ ಓದಿ: 'ಯುವ' ಅಡ್ವಾನ್ಸ್ ಬುಕಿಂಗ್ ಶುರು: ರಾಜ್ಕುಮಾರ್ ಮೊಮ್ಮಗನ ಚೊಚ್ಚಲ ಚಿತ್ರ ಬಿಡುಗಡೆಗೆ ಇನ್ನೊಂದೆ ದಿನ ಬಾಕಿ - Yuva