Watch; ಕೆರೆ ಮಧ್ಯೆದಲ್ಲಿ ಜಿಂಕೆ ಬೇಟೆಯಾಡಿದ ಸೀಳುನಾಯಿಗಳು: ಅದ್ಬುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ - Dholes hunted Deer - DHOLES HUNTED DEER

🎬 Watch Now: Feature Video

thumbnail

By ETV Bharat Karnataka Team

Published : Apr 16, 2024, 1:36 PM IST

ಮೈಸೂರು: ಕೆರೆಗೆ ನೀರು ಕುಡಿಯಲು ಹೋದ ಜಿಂಕೆಯನ್ನು ಸೀಳುನಾಯಿಗಳು ಬೇಟೆಯಾಡಿರುವ ಅಪರೂಪದ ದೃಶ್ಯವನ್ನು ಸಫಾರಿ ವಾಹನ ಚಾಲಕ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪೀಕಾಕ್​ ಕೆರೆಯಲ್ಲಿ ಬೇಟೆಯಾಡಿರುವ ದೃಶ್ಯ ಸೆರೆಯಾಗಿದೆ. ಕೆರೆಗೆ ನೀರು ಕುಡಿಯಲು ಬಂದ ಜಿಂಕೆಯನ್ನು ನೋಡಿದ ಎರಡು ಸೀಳು ನಾಯಿಗಳು ದಾಳಿ ಮಾಡಿದೆ. ಜಿಂಕೆ ಕೆರೆಯ ಮಧ್ಯ ಭಾಗಕ್ಕೆ ಹೋದರೂ ಬಿಡದ ಸೀಳು ನಾಯಿಗಳು ಜಿಂಕೆಯನ್ನು ಭೇಟೆಯಾಡಿ ಎಳೆದೊಯ್ದಿದೆ. ಜೆಎಲ್‌ಆ‌ರ್ ಚಾಲಕ ಸಂತೋಷ್​ ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ದೃಶ್ಯವನ್ನು ನೋಡುವಾಗ ಎಂಥವರ ಮನಸ್ಸು ಒಮ್ಮೆ ಸಂಕಟಪಡಬಹುದು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಜಿಂಕೆ ನೀರಲ್ಲಿ ಒದ್ದಾಡಿದರು. 2 ಮಾಂಸಭಕ್ಷಕರ ಮಧ್ಯೆ ಹೋರಾಡಿ ಜಿಂಕೆ ಮಡಿಯುತ್ತದೆ. ಸೀಳು ನಾಯಿಗಳು ತಮ್ಮ ಶಕ್ತಿಯನ್ನೆಲ್ಲಾ ಬಳಸಿ ಆಹಾರವನ್ನು ತಮ್ಮದಾಗಿಸಿಕೊಂಡಿವೆ.

ಈ ಪ್ರಕೃತಿಯೇ ಹೀಗೆ. ನಿಸರ್ಗ ಸಮತೋಲನದಲ್ಲಿ ಇರಬೇಕಾದರೆ ಆಹಾರ ಸರಪಳಿ ಇರಲೇಬೇಕು. ಹುಲ್ಲು ತಿಂದು ಬದುಕುವ ಕೀಟವನ್ನು ಕಪ್ಪೆ ತಿಂದರೆ, ಕಪ್ಪೆಯನ್ನು ತಿಂದು ಹಾವು, ಹಾವನ್ನು ತಿಂದು ಹದ್ದು, ಹದ್ದು ಸತ್ತ ನಂತರ ಅದರ ಪಳೆಯುಳಿಕೆ ಶಿಲೀಂದ್ರಗಳಾಗಿ ಕೊನೆಗೆ ಮಣ್ಣಿನಲ್ಲಿ ಬೇರೇ ಸಸ್ಯ ಆಹಾರವಾಗಿ ಉತ್ಪತ್ತಿಯಾಗುತ್ತದೆ. ಈ ಆಹಾರ ಸರಪಳಿ​ ಪ್ರಕೃತಿದತ್ತವಾಗಿ ಬಂದಿದೆ.

ಇದನ್ನೂ ಓದಿ: ಬೆಕ್ಕಿನ ಮರಿ ನುಂಗಿ ಪರದಾಡಿದ ನಾಗರಹಾವಿನ ರಕ್ಷಣೆ- ವಿಡಿಯೋ - Snake Swallowed Kitten

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.