ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ ಕಪಾಳಮೋಕ್ಷ ಮಾಡಿದ ಎಸ್‌ಡಿಎಂ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
🎬 Watch Now: Feature Video
Published : Feb 3, 2024, 12:17 PM IST
ಬಲಿಯಾ (ಉತ್ತರ ಪ್ರದೇಶ): ಜಿಲ್ಲೆಯ ಸಿಕಂದರ್‌ಪುರದಲ್ಲಿ ವಾರದಲ್ಲಿ ದಿನ ಅಂಗಡಿಗಳ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗುತ್ತದೆ. ಆ ದಿನ ಅಂಗಡಿ ತೆರೆದ ಜ್ಯುವೆಲ್ಲರಿ ಶಾಪ್ ಮಾಲೀಕನನ್ನು ತಳ್ಳಾಡಿದ ಎಸ್‌ಡಿಎಂ ಕಪಾಳಮೋಕ್ಷ ಮಾಡಿದ್ದಾರೆ. ಎಸ್‌ಡಿಎಂ ಜೊತೆಗಿದ್ದ ಪೊಲೀಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಈ ದೃಶ್ಯ ಅಂಗಡಿಯ ಒಳಗೆ ಮತ್ತು ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಹತ್ತಿರದ ಅಂಗಡಿಯವರು ಜಮಾಯಿಸಿದರು. ಆಗ ಎಸ್‌ಡಿಎಂ ಸ್ಥಳದಿಂದ ನಿರ್ಗಮಿಸಿದರು. ಈ ಘಟನೆಯಿಂದ ವ್ಯಾಪಾರಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆಯ ವಿಡಿಯೋ ಕಾಣಿಸಿಕೊಂಡಾಗ ಎಸ್‌ಡಿಎಂ ಮೌನ ವಹಿಸಿದ್ದಾರೆ. ತಾವು ಯಾವುದೇ ರೀತಿಯ ಅಸಭ್ಯ ವರ್ತನೆ ತೋರಿಲ್ಲ ಎಂದು ನಿರಾಕರಿಸಿದ್ದಾರೆ.
ಜ್ಯುವೆಲ್ಲರಿ ವ್ಯಾಪಾರಿ ದೀಪಕ್ ಸೋನಿ ಮಾತನಾಡಿ, ''ಈ ಪ್ರದೇಶದಲ್ಲಿ ವಾರದಲ್ಲಿ ಒಂದು ದಿನ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ. ಈ ನಿರ್ಣಯವನ್ನು ನಾವೂ ಗೌರವಿಸುತ್ತೇವೆ. ತಮ್ಮ ಮನೆ ಮತ್ತು ಅಂಗಡಿ ಒಂದೇ ಆಗಿದೆ. ಆ ದಿನ ಅಂಗಡಿಯ ಶೆಟರ್ ಎತ್ತಿ ಒಳಗೆ ಸ್ವಚ್ಛಗೊಳಿಸುತ್ತಿದ್ದೆ. ಅಷ್ಟರಲ್ಲಿ ಎಸ್‌ಡಿಎಂ ತಪಾಸಣೆಗೆಂದು ಹೊರಗೆ ಬಂದಿದ್ದರು. ಸ್ವಚ್ಛಗೊಳಿಸಿದ ನಂತರ ಎಸ್‌ಡಿಎಂ ರವಿಕುಮಾರ್ ಓಡಿ ಬಂದಾಗ ನಾನು ಅಂಗಡಿಯ ಶೆಟರ್ ಅನ್ನು ಕೆಳಗೆ ಎಳೆಯುತ್ತಿದ್ದೆ. ಎಸ್‌ಡಿಎಂ ಬಂದು ನನ್ನನ್ನು ತಳ್ಳಿದರು ಮತ್ತು ಕಪಾಳಮೋಕ್ಷ ಮಾಡಿದರು. ತನ್ನ ಜೊತೆಗೆ ಅವರ ಜೊತೆಯಲ್ಲಿದ್ದ ಇಬ್ಬರು ಕಾನ್ಸ್ಟೇಬಲ್ಗಳು ಜಗಳವಾಡಿದ್ದಾರೆ. ಅವರನ್ನು ಬಲವಂತವಾಗಿ ಠಾಣೆಗೆ ಕರೆದೊಯ್ಯಲು ಆರಂಭಿಸಿದರು. ಈ ಬಗ್ಗೆ ನಾನು ನೋಟಿಸ್ ನೀಡಿ ಕ್ರಮ ಕೈಗೊಳ್ಳಿ, ಠಾಣೆಗೆ ಕರೆದೊಯ್ಯುವ ಹಕ್ಕು ನಿಮಗಿಲ್ಲ ಎಂದು ದೀಪಕ್ ಸೋನಿ ಕಿಡಿಕಾರಿದ್ದಾರೆ. ಸಮೀಪದ ಇತರ ಅಂಗಡಿಯವರು ಜಮಾಯಿಸಿದರು. ಇದಾದ ಮೇಲೆ ಎಸ್‌ಡಿಎಂ ಅಲ್ಲಿಂದ ನಿರ್ಗಮಿಸಿದರು.
ಯಾರಿರೊಂದಿಗೂ ಅಸಭ್ಯತೆ ಮಾಡಿಲ್ಲ- ಎಸ್‌ಡಿಎಂ: ಘಟನೆಯ ನಂತರ ಜ್ಯುವೆಲ್ಲರಿ ವ್ಯಾಪಾರಿಗಳು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಭೆ ನಡೆಸಿ ವಾರದಲ್ಲಿ ಒಂದು ದಿನ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಲಾಯಿತು. ಕ್ಷೇತ್ರದ ಎಲ್ಲ ಉದ್ಯಮಿಗಳೊಂದಿಗೆ ಸಭೆ ನಡೆಸಲಾಗಿದೆ. ಎಲ್ಲರೂ ಅದನ್ನು ಅನುಸರಿಸುತ್ತಿದ್ದಾರೆ. ಈ ವಿಚಾರವಾಗಿ ಯಾರೊಂದಿಗೂ ಅನುಚಿತವಾಗಿ ವರ್ತನೆ ಮಾಡಿಲ್ಲ ಎಂದು ಎಸ್‌ಡಿಎಂ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮಥುರಾದ ಬಂಕೆ ಬಿಹಾರಿ ದೇವಸ್ಥಾನಕ್ಕೆ ನಟ ಅಶುತೋಷ್ ರಾಣಾ ಭೇಟಿ