LIVE: ಮೈಸೂರು ಚಲೋಗೆ ಸೆಡ್ಡು: ಕಾಂಗ್ರೆಸ್​ ಜನಾಂದೋಲನ ಕಾರ್ಯಕ್ರಮ - Janandolana Program

🎬 Watch Now: Feature Video

thumbnail

By ETV Bharat Karnataka Team

Published : Aug 9, 2024, 12:39 PM IST

Updated : Aug 9, 2024, 3:33 PM IST

ಮೈಸೂರು: ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಪ್ರತಿಪಕ್ಷಗಳಾದ ಬಿಜೆಪಿ - ಜೆಡಿಎಸ್​ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಗೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್​​ ಸರ್ಕಾರದಿಂದ ಜನಾಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಜೊತೆಗೆ, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಹಾಗೂ ಕೇಂದ್ರದ ಮಲತಾಯಿ ದೋರಣೆ ವಿರುದ್ಧ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೈಸೂರಿನಲ್ಲಿ ನಡೆಯುತ್ತಿರುವ ಜನಾಂದೋಲನ ಸಮಾರಂಭದ ನೇರಪ್ರಸಾರ ಇಲ್ಲಿದೆ. ಈಗಾಗಲೇ, ಮೈಸೂರು ಚಲೋ ಪಾದಯಾತ್ರೆ ಘೋಷಣೆ ಬೆನ್ನಲ್ಲೇ, ಬಿಡದಿ, ರಾಮನಗರ, ಮಂಡ್ಯಗಳಲ್ಲಿ ಕಾಂಗ್ರೆಸ್​​ ಜನಾಂದೋಲನ ಸಮಾರಂಭಗಳು ನಡೆದಿವೆ. ಇಂದೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ತವರಿನಲ್ಲಿ ಬೃಹತ್​ ಸಮಾರಂಭದ ಮೂಲಕ ಪ್ರತಿಪಕ್ಷಗಳ ಪಾದಯಾತ್ರೆ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್​ ಮುಂದಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರು, 60ಕ್ಕೂ ಹೆಚ್ಚು ಕೆಎಸ್​​ಆರ್​​ಪಿ ತುಕಡಿಗಳು, 30ಕ್ಕೂ ಹೆಚ್ಚು ಡಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮದ ಸುತ್ತ ಹಾಗೂ ಪ್ರಮುಖ ಸರ್ಕಲ್​​ಗಳಲ್ಲಿ 400ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳು ಮತ್ತು 400ಕ್ಕೂ ಹೆಚ್ಚು ಬಾಡಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 
Last Updated : Aug 9, 2024, 3:33 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.