ಬೆಂಗಳೂರು: ಚಾಲಕ ರಹಿತ ಮೆಟ್ರೋ ಬೋಗಿಗಳ ಆಗಮನ, ಮಾಚ್ 1ರಿಂದ ಪ್ರಯೋಗಾರ್ಥ ಪರೀಕ್ಷೆ - ಚಾಲಕ ರಹಿತ ಮೆಟ್ರೋ ರೈಲು
🎬 Watch Now: Feature Video
Published : Feb 18, 2024, 7:48 AM IST
ಬೆಂಗಳೂರು: ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋದ ಚಾಲಕ ರಹಿತ ರೈಲಿನ ಬೋಗಿಗಳು ಹೆಬ್ಬಗೋಡಿಗೆ ಬಂದು ತಲುಪಿವೆ. ಹೊಸದಾಗಿ ಬಂದ ಆರು ಕೋಚ್‌ಗಳನ್ನು ಅನ್‌ಲೋಡ್ ಮಾಡಿ ಹಳಿಗಳ ಮೇಲೆ ಜೋಡಿಸಲಾಗಿದೆ.
ಎರಡು ದಿನದ ಹಿಂದೆ ನಮ್ಮ ಮೆಟ್ರೋದ ಪ್ರೊಟೊ ಟೈಪ್ಗಳು ಬೆಂಗಳೂರಿಗೆ ಆಗಮಿಸಿದ್ದು, ಲಾರಿಗಳಿಂದ ಅನ್‌ಲೋಡ್ ಮಾಡಿ ಹಳಿಗಳ ಮೇಲೆ ಜೋಡಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋದ ಪ್ರಯೋಗಾರ್ಥ ಪರೀಕ್ಷೆ ಮಾ.1 ರಂದು ನಡೆಯಲಿದೆ. ಆದರೆ ಈ ಮೆಟ್ರೋ ಕೋಚ್‌ಗಳು ಚಾಲಕ ರಹಿತ ಆಗಿರುವುದರಿಂದ ಇವುಗಳ ಪ್ರಾಯೋಗಿಕ ಸಂಚಾರಕ್ಕೆ ಸಹಕಾರಿಯಾಗುವಂತೆ ಮಾಹಿತಿ ನೀಡಲು ಬೋಗಿ ನಿರ್ಮಿಸಿದ ಚೀನಾ ಕಂಪನಿಯ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ, ಆ ಬಳಿಕ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ.
ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ. ಚಲಿಸುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಿದ್ದು, ಆ ಬಳಿಕ ಟ್ರ್ಯಾಕ್ನಲ್ಲಿ 15 ಪರೀಕ್ಷೆಗಳನ್ನು ಮಾಡಬೇಕಿದೆ. ನಂತರ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟದ ಬಗ್ಗೆ ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆಯ ಅಗತ್ಯವಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಬಜೆಟ್ನಲ್ಲಿ ಕೊಟ್ಟಿದ್ದು ಶೇ 0.8 ರಷ್ಟು ಮಾತ್ರ: ಸಿಎಂ ಸಿದ್ದರಾಮಯ್ಯ