ಮನೆ ಬೀಗ ಮುರಿದು 1ಕೆಜಿ ಬೆಳ್ಳಿ 30 ಗ್ರಾಂ ಚಿನ್ನ ಕದ್ದೊಯ್ದ ಕಳ್ಳರು - ಮನೆ ಕಳುವು

🎬 Watch Now: Feature Video

thumbnail

By ETV Bharat Karnataka Team

Published : Jan 23, 2024, 8:54 PM IST

ನೆಲಮಂಗಲ: ಮನೆಗೆ ಬೀಗ ಹಾಕಿ ದೇವಸ್ಥಾನಕ್ಕೆ ತೆರಳಿದ ಕುಟುಂಬದ ಸದಸ್ಯರು, ವಾಪಸ್ ಮನೆಗೆ ಬರುವುದರೊಳಗೆ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ 1 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನವನ್ನು ಕಳ್ಳರು ಕದ್ದೊಯ್ದಿರುವ ಘಟನೆ ನೆಲಮಂಗಲದ ಕಾವೇರಿ ನಗರದಲ್ಲಿ ನಡೆದಿದೆ. ಮಂಜುನಾಥ್ ಮತ್ತು ರೂಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯವರು ದೇವಾಲಯಕ್ಕೆ ಹೋಗಿದನ್ನು ಗಮನಿಸಿರುವ ಕಳ್ಳರು ಈ ಕೃತ್ಯ ಎಸಗಿದ್ದಾರೆ.

ಇಂದು ಮಧ್ಯಾಹ್ನ ಮನೆಯ ಗೇಟ್ ಮುಖ್ಯದ್ವಾರ ಒಡೆದು ಯಾರಿಗೂ ಅನುಮಾನ ಬಾರದಂತೆ ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳತನದಿಂದ ಅಕ್ಕ ಪಕ್ಕದ ನಿವಾಸಿಗಳು ಆತಂಕಗೊಂಡಿದ್ದಾರೆ. ಹಾಡಹಗಲೇ ಈ ರೀತಿ ಆದರೆ ಮುಂದಿನ ಗತಿಯೇನು ಎಂಬ ಚಿಂತೆ ಸಾರ್ವಜನಿಕರಲ್ಲಿ ಕಾಡತೊಡಗಿದೆ. ಡಿವೈಎಸ್ಪಿ ಜಗದೀಶ್ ಹಾಗೂ ಟೌನ್ ಇನ್ಸ್​ಪೆಕ್ಟರ್​ ಶಶಿಧರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಟೌನ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅಪಘಾತವೆಸಗಿದ್ದಕ್ಕೆ ವಾಗ್ವಾದ: ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಚಾಲಕ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.