ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ನೇರಪ್ರಸಾರ
🎬 Watch Now: Feature Video
Published : Feb 29, 2024, 6:32 PM IST
|Updated : Feb 29, 2024, 8:21 PM IST
ಬೆಂಗಳೂರು: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಿದ್ದಾರೆ. ವಿಧಾನಸೌಧದ ಮುಂಭಾಗ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಡಾ.ಜಬ್ಬಾರ್ ಪಟೇಲ್, ನಟ ಶಿವರಾಜ್‌ಕುಮಾರ್, ಬಾಂಗ್ಲಾದೇಶದ ನಟಿ ಅಜಮೇರಿ ಬಂದೋನ್, ಜೆಕ್ ರಿಪಬ್ಲಿಕ್‌ನ ಚಲನಚಿತ್ರ ಶಿಕ್ಷಣ ತಜ್ಞ ಹಾಗು ವಿಮರ್ಶಕಿ ವಿಯರಾ ಲ್ಯಾಂಗರೋವಾ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸುವ ಮುನ್ನ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನಾ ಚಿತ್ರವಾಗಿ ಬೋಂಜೂರ್ ಸ್ವಿಟ್ಜರ್ಲೆಂಡ್ ಎಂಬ ಸ್ವಿಸ್ ಚಿತ್ರ ಪ್ರದರ್ಶನವಾಗಲಿದೆ. ಇಂದಿನಿಂದ ಮಾರ್ಚ್ 7ರವರೆಗೆ ಚಿತ್ರೋತ್ಸವ ನಡೆಯಲಿದೆ. ಒರಾಯನ್ ಮಾಲ್‍ನ ಪಿವಿಆರ್, ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ದೇಶ, ವಿದೇಶ ಸೇರಿದಂತೆ 180ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿವೆ.ಚಲನಚಿತ್ರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟ (FIAPF) ಮಾನ್ಯತೆ ಪಡೆದ ಈ ಚಲನಚಿತ್ರೋತ್ಸವ, ರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಚಲನಚಿತ್ರ ನಿರ್ಮಾಪಕರು, ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಮಾರ್ಚ್ 7ರಂದು ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ.
Last Updated : Feb 29, 2024, 8:21 PM IST