ನೂರಾರು ಚಿಣ್ಣರಿಂದ ಬಾಲರಾಮ ಚಿತ್ರ ರಚನೆ: ಭಕ್ತರಿಂದ ರಾಮತಾರಕ ಮಹಾಮಂತ್ರ ಯಜ್ಞ - ವಿಡಿಯೋ - Balarama drawing competition
🎬 Watch Now: Feature Video
Published : Jan 22, 2024, 12:26 PM IST
ಚಾಮರಾಜನಗರ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಜಿಲ್ಲೆಯಲ್ಲಿನ ದೇಗುಲಗಳ ಆವರಣ ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿವೆ. ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವ ಶುಭ ದಿನದಲ್ಲಿ ಚಾಮರಾಜನಗರ ರಾಮ ಭಕ್ತರ ಸಂಭ್ರಮ ಜೋರಾಗಿದ್ದು, ವಿಶೇಷ ಪೂಜೆ, ಹೋಮ ಹವನಗಳು ನೆರವೇರುತ್ತಿವೆ. ಚಾಮರಾಜನಗರದ ಶಂಕರಪುರ ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಬ್ಬದ ಸಡಗರ ಉಂಟಾಗಿದ್ದು, ಶ್ರೀ ರಾಮತಾರಕ ಮಹಾ ಮಂತ್ರ ಜಪ ಸಾಂಗತಾ ಯಜ್ಞವನ್ನು ಶ್ರೀ ಚಂದ್ರಶೇಖರ ಭಾರತೀ ಸೇವಾ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿದೆ. ನೂರಾರು ಮಂದಿ ರಾಮ ಭಕ್ತರು ಈ ಯಜ್ಞದಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ, ರಾಮಮಂದಿರದಲ್ಲಿ ಅಯೋಧ್ಯೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಎಲ್ಸಿಡಿ ಸ್ಕ್ರೀನ್ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.
ನೂರಾರು ಚಿಣ್ಣರಿಂದ ರಾಮಚಿತ್ರ: ಚಾಮರಾಜೇಶ್ವರ ದೇಗುಲ ಮುಂಭಾಗ ಇಂದು ರಾಮ ಮಂದಿರ, ರಾಮನ ಚಿತ್ರ ಬಿಡುಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ನೂರಾರು ಚಿಣ್ಣರು ತಮ್ಮ ಕಲ್ಪನೆಯ ಬಾಲರಾಮ, ಶ್ರೀರಾಮಚಂದ್ರ ಹಾಗೂ ರಾಮ ಮಂದಿರದ ಚಿತ್ರಗಳನ್ನು ಬಿಡಿಸಿದ್ದಾರೆ.
ಇದನ್ನೂ ಓದಿ: ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ: ಬೆಂಗಳೂರಿನಲ್ಲಿ ನಡೆಯಲಿವೆ ವಿಶೇಷ ಕಾರ್ಯಕ್ರಮಗಳು