ಮತ ಚಲಾಯಿಸಿದ ಎರಡೂ ಕಾಲುಗಳಿಲ್ಲದ ವೃದ್ಧ: ಕಾಲಿಗೆ ಗಾಯವಾದರೂ ಮತದಾನಕ್ಕೆ ಆಗಮಿಸಿದ ಯುವತಿ - Old Man Cast Vote - OLD MAN CAST VOTE

🎬 Watch Now: Feature Video

thumbnail

By ETV Bharat Karnataka Team

Published : May 7, 2024, 12:56 PM IST

ಹುಬ್ಬಳ್ಳಿ/ಕಾರವಾರ: ಎರಡೂ ಕಾಲುಗಳಿಲ್ಲದೇ ಇದ್ದರೂ 62ರ ವೃದ್ಧರೋರ್ವರು ಇಂದು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ನಾಗಪ್ಪ ಯೋಗಪ್ಪನವರ ಮತದಾನ ಮಾಡಿದ ವೃದ್ಧ. ವ್ಹೀಲ್ ಚೇರ್ ಮೂಲಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸಿದ ಅವರು ಮತ ಚಲಾಯಿಸಿ ಇತರರಿಗೂ ಮಾದರಿಯಾದರು.

ಕಾಲು ಮುರಿದರೂ ಕುಂಟುತ್ತಲೇ ಆಗಮಿಸಿದ ಯುವತಿ ಮತದಾನ ಮಾಡಿದರು. ಈ ಮೂಲಕ ಮತದಾನದ ಮಹತ್ವ ಸಾರಿದ್ದಾರೆ. ಕಾರವಾರದ ಸೆಂಟ್ ಮೈಕಲ್ ಶಾಲೆಯ ಮತಗಟ್ಟೆ ಸಂಖ್ಯೆ 107ರಲ್ಲಿ ಅನುಷಾ ಪ್ರಭು ಎನ್ನುವ ಯುವತಿ ಮತ ಚಲಾಯಿಸಿದ್ದಾರೆ. ಕಾಲಿನ‌ ಮೂಳೆ ಮುರಿತಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಬ್ಯಾಂಡೇಜ್ ಸುತ್ತಿಕೊಂಡು ಬಂದಿದ್ದರು. ನಡೆದಾಡಲು ಸಾಧ್ಯವಾಗದೇ ಇದ್ದರೂ ಕೂಡ ಯುವತಿ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದ್ದಾರೆ. ಆದರೆ 107 ಸಂಖ್ಯೆಯ ಮತಗಟ್ಟೆಯಲ್ಲಿ ಸೂಕ್ತ ಸಮಯಕ್ಕೆ ಮತದಾನ ಪ್ರಾರಂಭವಾಗದ ಕಾರಣ ಸುಮಾರು ಒಂದೂವರೆ ಗಂಟೆಗಳ ಕಾಲ ಕಾದು ಕುಳಿತು ಮತದಾನ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಕಾರವಾರ, ಶಿವಮೊಗ್ಗದಲ್ಲಿ ಕೈಕೊಟ್ಟ ಮತಯಂತ್ರ, ತಡವಾದ ಮತದಾನ - Voting Machine Problem

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.