ಹಾವೇರಿಯಲ್ಲಿ ಹಾಡಹಗಲೇ ಡಾಕ್ಟರ್ ಮನೆ ಕಳ್ಳತನಕ್ಕೆ ಯತ್ನ: ಸಿಸಿಟಿವಿ ದೃಶ್ಯ - Thieves Attempt Theft - THIEVES ATTEMPT THEFT
🎬 Watch Now: Feature Video
Published : May 28, 2024, 8:21 AM IST
ಹಾವೇರಿ: ಹಗಲು ಹೊತ್ತಿನಲ್ಲೇ ವೈದ್ಯರ ಮನೆ ಕಳ್ಳತನಕ್ಕೆ ಯತ್ನಿಸಿದ ಘಟನೆ ಹಾವೇರಿಯ ಬಸವೇಶ್ವರ ನಗರದ 9ನೇ ಕ್ರಾಸ್ ಬಿ ಬ್ಲಾಕ್ನಲ್ಲಿ ನಡೆದಿದೆ. ಹೃದಯ ರೋಗಗಳ ತಜ್ಞರಾದ ಭಗವತಿ ಎಂಬವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.
ಸ್ಕೋಡಾ ಕಾರಿನಲ್ಲಿ ಬಂದ ಆರೋಪಿಗಳ ತಂಡ ಕಳ್ಳತನಕ್ಕೆ ಹವಣಿಸಿದೆ. ವೈದ್ಯರು ಮನೆಯಿಂದ ಆಸ್ಪತ್ರೆಗೆ ಹೋಗುವುದನ್ನು ಗಮನಿಸಿದ ಆರೋಪಿಗಳು ಕಳ್ಳತನಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಮನೆ ಹಿಂಬದಿಯ ಬಾಗಿಲು ಮುರಿದು ದುಷ್ಕೃತ್ಯಕ್ಕೆ ಯತ್ನಿಸುತ್ತಿದ್ದಾಗ, ವೈದ್ಯರು ಮನೆಗೆ ವಾಪಸ್ ಬರುತ್ತಿರುವುದನ್ನು ಕಂಡು ಹಿಂದಿನ ಕಾಂಪೌಂಡ್ ಜಿಗಿದು ಪರಾರಿಯಾಗಿದ್ದಾರೆ.
ನಾಲ್ವರಿದ್ದ ಗ್ಯಾಂಗ್ ಪರಾರಿಯಾಗಿರುವ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಬಾಗಿಲು ಮುರಿಯಲು ಕಬ್ಬಿಣದ ರಾಡ್, ಚಾಕುವಿನೊಂದಿಗೆ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಮಂಡ್ಯ: ಹೊಳೆ ಆಂಜನೇಯ ಸ್ವಾಮಿ ದೇಗುಲದ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ - WILD ELEPHANTS