ಬೆಳಗಾವಿಗೆ ತೆರಳುತ್ತಿದ್ದ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಸೆಲ್ಫಿಗೆ ಮುಗಿಬಿದ್ದ ಗ್ರಾಮಸ್ಥರು - Emergency Landing - EMERGENCY LANDING

🎬 Watch Now: Feature Video

thumbnail

By ETV Bharat Karnataka Team

Published : May 4, 2024, 12:54 PM IST

ಸಾಂಗ್ಲಿ (ಮಹಾರಾಷ್ಟ್ರ): ಇಂದು  ಮುಂಜಾನೆ ಸಾಂಗ್ಲಿಯ ಎರಂಡೋಲಿಯಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ನಾಸಿಕ್‌ನಿಂದ ಬೆಳಗಾವಿಗೆ ತೆರಳುತ್ತಿದ್ದಾಗ ಹಠಾತ್ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಸಾಂಗ್ಲಿಯ ಎರಂಡೋಲಿಯ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 

Army Helicopter Emergency Landing: ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಷ ಮಾಡಿದ ಹೆಲಿಕಾಪ್ಟರ್​ ಸುದ್ದಿ ಕೇಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸತೊಡಗಿದರು. ಹೆಲಿಕಾಪ್ಟರ್​ ನೋಡಿದ ಗ್ರಾಮಸ್ಥರು ಅದರ ಬಳಿ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು. ಈ ವೇಳೆ ಸೇನೆಯ ಸಿಬ್ಬಂದಿ ಹೆಲಿಕಾಪ್ಟರ್​ ಹತ್ತಿರ ಸುಳಿಯ ಬೇಡಿ ಅಂತಾ ಎಷ್ಟೇ ಮನವಿ ಮಾಡಿದ್ರೂ ಗ್ರಾಮಸ್ಥರು ಖ್ಯಾರೇ ಎನ್ನದೇ ಫೋಟೋಗೆ ಮುಗಿ ಬೀಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ಸುದ್ದಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗಿದ್ದು, ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶವಾದ ಸ್ಥಳಕ್ಕೆ ಸೇನೆಯ ಇತರ ಸಿಬ್ಬಂದಿ ದೌಡಾಯಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದುಬರಬೇಕಾಗಿದ್ದು, ಸದ್ಯ ಹೆಲಿಕಾಪ್ಟರ್​ ಲ್ಯಾಂಡ್​ ಆದ ಸ್ಥಳದಲ್ಲಿ ಜನಸಾಗರವೇ ಹರಿದು ಬರುತ್ತಿದೆ.

ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 4 ದಿನ ಬಿಸಿ ಗಾಳಿ, ಮೇ 8 ರಿಂದ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - Karnataka IMD Report 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.