ಹುಡುಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಅಪರಿಚಿತ ಮುಸುಕುಧಾರಿ ಯುವಕ - Girl brutal murder - GIRL BRUTAL MURDER

🎬 Watch Now: Feature Video

thumbnail

By ETV Bharat Karnataka Team

Published : Jun 8, 2024, 2:31 PM IST

Updated : Jun 8, 2024, 3:08 PM IST

ಮೊಹಾಲಿ (ಪಂಜಾಬ್): ಹುಡುಗಿಯ ಮೇಲೆ ಅಪರಿಚಿತ ಯುವಕರು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಪಂಜಾಬ್​ ಮೊಹಾಲಿ 5ನೇ ಹಂತದ ಪ್ರದೇಶದಲ್ಲಿ ಬಳಿ ನಡೆದಿದೆ. ದಾಳಿಕೋರನ ಕ್ರೌರ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ದಾಳಿಯ ನಂತರ ಗಂಭೀರವಾಗಿ ಗಾಯಗೊಂಡಿದ್ದ ಹುಡುಗಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಕೆಲವು ಹೊತ್ತನ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಹಾಡಹಗಲೇ ಕೊಲೆ: ಮೃತ ಹುಡುಗಿ ಫತೇಘರ್ ಸಾಹಿಬ್‌ ಪ್ರದೇಶದ ನಿವಾಸಿಯಾಗಿದ್ದಾಳೆ. ಮೊಹಾಲಿಯ 5 ನೇ ಹಂತದ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಮೊಹಾಲಿಯಂತಹ ಹೈ ಸೆಕ್ಯುರಿಟಿ ಸಿಟಿಯಲ್ಲಿ ಹಗಲು ಹೊತ್ತಿನಲ್ಲೇ ನಡೆದಿರುವ ಈ ಹತ್ಯೆ ಮತ್ತೊಮ್ಮೆ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಜನರು ಚಿಂತೆಗೆ ಈಡಾಗಿದ್ದಾರೆ. ಜನ ಸಾಮಾನ್ಯರಲ್ಲಿ ಸೌಹಾರ್ದತೆಯ ವಾತಾವರಣ ಇರುವ ಕಡೆ ಪೊಲೀಸರು ಹಾಗೂ ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಜನ ಪ್ರಶ್ನೆ ಮೂಡಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಕೊಲೆ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Watch: ಕಾಡಿನಲ್ಲಿ ಪ್ರಾಬಲ್ಯಕ್ಕಾಗಿ ಮದಗಜಗಳ ನಡುವೆ ರೋಚಕ, ರಣರೋಚಕ ಕಾಳಗ: ಕಾಡಾನೆ ಅಟ್ಟಾಡಿಸಿದ ಒಂಟಿ ಸಲಗ!! - Wild Elephant Video

Last Updated : Jun 8, 2024, 3:08 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.