ETV Bharat / technology

ಏ.8 ರಂದು ಸಂಪೂರ್ಣ ಸೂರ್ಯಗ್ರಹಣ: ಏನಿದರ ವಿಶೇಷತೆ, ಭಾರತದಲ್ಲಿ ವೀಕ್ಷಿಸುವುದು ಹೇಗೆ? - SOLAR ECLIPSE - SOLAR ECLIPSE

ಏ.8ರಂದು ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣವನ್ನು ಭಾರತದಲ್ಲೂ ವೀಕ್ಷಿಸಬಹುದಾಗಿದೆ.

ಏ.8 ರಂದು ಸಂಪೂರ್ಣ ಸೂರ್ಯಗ್ರಹಣ
ಏ.8 ರಂದು ಸಂಪೂರ್ಣ ಸೂರ್ಯಗ್ರಹಣ
author img

By ETV Bharat Karnataka Team

Published : Apr 3, 2024, 1:12 PM IST

ಹೈದರಾಬಾದ್: ಏಪ್ರಿಲ್ 8 ರಂದು ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣಕ್ಕಾಗಿ ಖಗೋಳ ಆಸಕ್ತರು ಎದುರು ನೋಡುತ್ತಿದ್ದಾರೆ. ಖಗೋಳ ಅದ್ಭುತ ಎಂದು ನಿರೀಕ್ಷಿಸಲಾದ ಈ ಗ್ರಹಣವು ಭೂಮಿಯ ಸಾಮೀಪ್ಯ ಮತ್ತು ಸಂಭಾವ್ಯ ಸೌರ ಸ್ಫೋಟಗಳಿಂದಾಗಿ ವಿಸ್ತೃತ ಅವಧಿಯವರೆಗೆ ಘಟಿಸಲಿದೆ ಮತ್ತು ಹೆಚ್ಚಿನ ಚಟುವಟಿಕೆಗಳಿಗೆ ಸಾಕ್ಷಿಯಾಗಲಿದೆ.

ಸಂಪೂರ್ಣ ಸೂರ್ಯಗ್ರಹಣ ಎಂದರೇನು: ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ, ಸೂರ್ಯನು ಭೂಮಿಗೆ ಗೋಚರವಾಗದಂತಾದಾಗ ಸಂಪೂರ್ಣ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರನ ನೆರಳು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿರುವ ಸ್ಥಿತಿಯಲ್ಲಿ ಗ್ರಹಣವು ಗೋಚರವಾಗುವ ವಿದ್ಯಮಾನವನ್ನು ಸಂಪೂರ್ಣತೆಯ ಪಥ ಎಂದು ಕರೆಯಲಾಗುತ್ತದೆ. ಗ್ರಹಣದ ಸಮಯದಲ್ಲಿ ಮುಂಜಾನೆ ಅಥವಾ ಮುಸ್ಸಂಜೆಯಂತೆ ಕತ್ತಲೆ ಆವರಿಸುತ್ತದೆ.

ಭಾರತದಲ್ಲಿ ಗ್ರಹಣ ಗೋಚರವಿಲ್ಲ: ಸಂಪೂರ್ಣ ಸೂರ್ಯ ಗ್ರಹಣವು ಅಪರೂಪದ ಖಗೋಳ ಗ್ರಹಣವಾಗಿದ್ದು, ಇದು ಯುನೈಟೆಡ್ ಸ್ಟೇಟ್ಸ್(ಅಮೆರಿಕ), ಮೆಕ್ಸಿಕೋ, ಕೆನಡಾ ಮತ್ತು ಪ್ರಪಂಚದ ಇತರ ಭಾಗಗಳನ್ನು ಒಳಗೊಂಡಂತೆ ಉತ್ತರ ಅಮೆರಿಕದ ಅನೇಕ ಭಾಗಗಳಲ್ಲಿ ಗೋಚರಿಸುತ್ತದೆ. ಆದರೆ ಭಾರತದಲ್ಲಿ ಗ್ರಹಣದ ಗೋಚರವಾಗುವುದಿಲ್ಲ.

ಸೂರ್ಯಗ್ರಹಣದ ಸಮಯ: ಏಪ್ರಿಲ್ 8, 2024 ರಂದು ಮಧ್ಯಾಹ್ನ 2:12ಕ್ಕೆ ಪ್ರಾರಂಭವಾಗಿ ಏಪ್ರಿಲ್​ 9ರಂದು 2:2ಕ್ಕೆ ಮುಕ್ತಾಯಗೊಳ್ಳುತ್ತದೆ. ಸಂಪೂರ್ಣ ಸೂರ್ಯಗ್ರಹಣವು ಸುಮಾರು 12 ಗಂಟೆಗಳ ಕಾಲ ಸಂಭವಿಸಲಿದೆ.

ಎಲ್ಲಿ ಗೋಚರಿಸುತ್ತದೆ?: ಇದು ಮೆಕ್ಸಿಕೊದ ಪೆಸಿಫಿಕ್ ಕರಾವಳಿಯಿಂದ ಪ್ರಾರಂಭವಾಗಿ, ಯುನೈಟೆಡ್ ಸ್ಟೇಟ್ಸ್ ಮೂಲಕ ಹಾದು ಪೂರ್ವ ಕೆನಡಾದಲ್ಲಿ ಕೊನೆಗೊಳ್ಳುತ್ತದೆ.

ಭಾರತೀಯರು ಗ್ರಹಣ ವೀಕ್ಷಿಸುವುದು ಹೇಗೆ?: ಭಾರತದಲ್ಲಿ ಸೂರ್ಯಗ್ರಹಣವು ಗೋಚರಿಸುವುದಿಲ್ಲ, ಆದರೆ ಗ್ರಹಣದ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದಾಗಿದೆ. ಸೆಲೆಸ್ಟಿಯಲ್ ಮೆರ್ವೆಲ್‌ನ ಲೈವ್ ಸ್ಟ್ರೀಮ್ ಅನ್ನು NASA ಆಯೋಜಿಸುತ್ತಿದೆ. ಇದು ಏಪ್ರಿಲ್ 8 ರಂದು 10.30 ರಿಂದ ಏಪ್ರಿಲ್ 9 ರಂದು 1.30 AM ವರೆಗೆ ನೇರ ಪ್ರಸಾರವಾಗಲಿದೆ. ಇದು ನಾಸಾ ತಜ್ಞರ ಸಂಭಾಷಣೆಯನ್ನು ಒಳಗೊಂಡಿರುತ್ತದೆ.

ಸಂಪೂರ್ಣ ಸೂರ್ಯಗ್ರಹಣ ಕಾಣುವುದು ವಿರಳ ಏಕೆ : ಸಂಪೂರ್ಣ ಸೂರ್ಯಗ್ರಹಣವು ಕಾಣುವಂಥ ಪ್ರದೇಶಗಳನ್ನು ಹುಡುಕಿ ಅಲ್ಲಿಂದ ಅದನ್ನು ನೋಡುವುದು ಸವಾಲಿನ ವಿಷಯವಾಗಿದೆ. ಭೂಮಿಯು ಶೇ 70ಕ್ಕಿಂತ ಹೆಚ್ಚು ಸಮುದ್ರಗಳಿಂದ ಕೂಡಿರುವುದರಿಂದ ಸಂಪೂರ್ಣ ಗ್ರಹಣ ಕಾಣಿಸುವಂಥ ಸ್ಥಳ ಹುಡುಕಾಡುವುದೇ ಒಂದು ದೊಡ್ಡ ಸಾಹಸದ ಕೆಲಸವಾಗುತ್ತದೆ.

ಸೌಂಡಿಂಗ್ ರಾಕೆಟ್ ಹಾರಿಸಲಿದೆ ನಾಸಾ: ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಸಂಸ್ಥೆಯು (ನಾಸಾ) ಏಪ್ರಿಲ್ 8 ರಂದು ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಮೂರು ಸೌಂಡಿಂಗ್ ರಾಕೆಟ್​ಗಳನ್ನು ಉಡಾವಣೆ ಮಾಡಲಿದ್ದು, ಗ್ರಹದ ಒಂದು ಭಾಗದ ಮೇಲೆ ಸೂರ್ಯನ ಬೆಳಕು ಕ್ಷಣಿಕವಾಗಿ ಮಂದವಾದಾಗ ಭೂಮಿಯ ಮೇಲಿನ ವಾತಾವರಣದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಲಿವೆ.

ಸೌಂಡಿಂಗ್ ರಾಕೆಟ್​ಗಳು ಮೂರು ವಿಭಿನ್ನ ಸಮಯಗಳಲ್ಲಿ ಉಡಾವಣೆಯಾಗಲಿವೆ: ಸ್ಥಳೀಯ ಗ್ರಹಣದ 45 ನಿಮಿಷಗಳ ಮೊದಲು, ಗ್ರಹಣದ ಸಮಯದಲ್ಲಿ ಮತ್ತು 45 ನಿಮಿಷಗಳ ನಂತರ. ಸೂರ್ಯನ ಹಠಾತ್ ಕಣ್ಮರೆ ಅಯಾನುಗೋಳದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ನಮ್ಮ ಸಂವಹನಗಳಿಗೆ ಹೇಗೆ ಅಡ್ಡಿಪಡಿಸುತ್ತದೆ ಎಂಬುದರ ಕುರಿತು ಡೇಟಾ ಸಂಗ್ರಹಿಸಲು ಮೂರು ವಿಭಿನ್ನ ಸಮಯಾವಧಿಗಳಲ್ಲಿ ಸೌಂಡಿಂಗ್ ರಾಕೆಟ್​ಗಳನ್ನು ಹಾರಿಸಲಾಗುವುದು ಎಂದು ನಾಸಾ ಹೇಳಿದೆ.

ಇದನ್ನೂ ಓದಿ: 2024ರಲ್ಲಿ ಎಷ್ಟು ಗ್ರಹಣಗಳು ನಡೆಯುತ್ತೆ, ಭಾರತದಲ್ಲಿ ಗೋಚರಿಸುವ ವಿಸ್ಮಯಗಳೆಷ್ಟು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.