ETV Bharat / technology

ಟಾಟಾ ಕಾರು ಪ್ರಿಯರಿಗೆ ಗುಡ್ ನ್ಯೂಸ್!: ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಪ್ ಕಾರುಗಳ ಚಿತ್ರಣ ಇಲ್ಲಿದೆ - Upcoming Tata Cars

Upcoming Tata Cars In 2024: ಕಾರು ಪ್ರಿಯರಿಗೆ ಸಿಹಿ ಸುದ್ದಿ. ದೇಶಿಯ ಆಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಒಂಬತ್ತು ಹೊಸ ಮಾದರಿ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಜೊತೆಗೆ 2025 ರಲ್ಲಿ ಸೂಪರ್ ಮಾಡೆಲ್ ಕಾರುಗಳನ್ನು ಸಹ ಮಾರುಕಟ್ಟೆಗೆ ತರಲು ಯೋಜನೆ ಹಾಕಿಕೊಂಡಿದೆ. ಅದು ನಿಮ್ಮ ಕೈಗೆಟುಕುವ ದರದಲ್ಲಿ!

author img

By ETV Bharat Karnataka Team

Published : Jul 8, 2024, 5:53 PM IST

UPCOMING TATA CARS
ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಕಾರು (ANI)

Upcoming Tata Cars In India 2024: ದೇಶೀಯ ಆಟೋಮೊಬೈಲ್ ದೈತ್ಯ, ಟಾಟಾ ಮೋಟಾರ್ಸ್ ಭಾರತದಲ್ಲಿ ಸುರಕ್ಷಿತ ವಾಹನಗಳ ತಯಾರಿಕೆಗೆ ಹೆಸರುವಾಸಿ. ಈ ಕಂಪನಿಯಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಾಗೂ ಕೈಗೆಟುಕುವ ದರದಲ್ಲಿ ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬರುತ್ತಿರುವುದು ವಾಹನ ಪ್ರಿಯರಿಗೆ ಖುಷಿ ತರಿಸಿದೆ. ಹಲವು ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದರಿಂದ ಎಲ್ಲರ ಚಿತ್ರ ಇತ್ತ ನೆಟ್ಟಿದೆ. ಕಾರು ಪ್ರಿಯರ ನಿರೀಕ್ಷೆಯಂತೆ 2024 ಮತ್ತು 2025ರಲ್ಲಿ ತನ್ನ ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಆ ಮಾದರಿ ಕಾರುಗಳು ಯಾವುವು? ಅವುಗಳ ಬೆಲೆ ಎಷ್ಟು? ಇತರ ಮಾಹಿತಿ ಇಲ್ಲಿದೆ.

1. Tata Nexon Fearless 1.2 CNG: ಟಾಟಾ ಕಂಪನಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಈ ನೆಕ್ಸಾನ್ ಫಿಯರ್‌ಲೆಸ್ 1.2 ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಈ ಕಾರು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿದೆ. 5 ಆಸನ ಸಾಮರ್ಥ್ಯ ಹೊಂದಿರುವ ಈ ಕಾರು 44 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ, ಈ ಕಾರು 6 ಏರ್ ಬ್ಯಾಗ್‌ಗಳನ್ನು ಹೊಂದಿದೆ. ಈ ಕಾರಿನ ಬೆಲೆ ಸುಮಾರು ರೂ.13.20 ಲಕ್ಷಗಳು ಎಂದು ನಿರೀಕ್ಷಿಸಲಾಗಿದೆ.

2. Tata Curvv EV: ಟಾಟಾ ಕರ್ವ್ ಇವಿ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ಇದನ್ನು ಒಂದು ಸಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 500 ಕಿ.ಮೀ ವರೆಗೆ ಕ್ರಮಿಸಬಹುದಾಗಿ ಎಂದು ಕಂಪನಿ ಈಗಾಗಲೇ ಹೇಳಿಕೊಂಡಿದೆ. ಈ ಕಾರಿನ ಬೆಲೆ ರೂಪಾಂತರಗಳನ್ನು ಅವಲಂಬಿಸಿದ್ದು, ರೂ.16 ಲಕ್ಷದಿಂದ ರೂ.22 ಲಕ್ಷದವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಈ ಕಾರು 4 ಆಸನ ಸಾಮರ್ಥ್ಯ ಹೊಂದಿರಲಿದೆ.

3. Tata Punch Facelift : ಈ ವರ್ಷದ ನವೆಂಬರ್‌ನಲ್ಲಿ ಟಾಟಾ ಪಂಚ್ ಫೇಸ್‌ಲಿಫ್ಟ್ ಭಾರತೀಯ ಮಾರುಕಟ್ಟೆಗೆ ಬರಲಿದೆ. 4 ರೂಪಾಂತರಗಳಲ್ಲಿ ಲಭ್ಯವಿರಲಿದೆ. ರೇಡಿಯೇಟರ್ ಗ್ರಿಲ್, ಹಿಂಭಾಗದ ಬಂಪರ್‌ಗಳು, ಮರುವಿನ್ಯಾಸಗೊಳಿಸಲಾದ LED ಹೆಡ್‌ಲ್ಯಾಂಪ್‌ಗಳು, ಟೈಲ್ ಲ್ಯಾಂಪ್‌ಗಳು ಮತ್ತು ಮಿಶ್ರಲೋಹದ ಚಕ್ರಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸಿಂಗಲ್ ಪೇನ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಇತ್ಯಾದಿ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. ಈ ಕಾರು 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದೆ. ಈ ಕಾರಿನ ಬೆಲೆ ರೂ. 6 ಲಕ್ಷದಿಂದ ರೂ. 11 ಲಕ್ಷ ಎಂದು ನಿರೀಕ್ಷಿಸಲಾಗಿದೆ.

4. Tata Curvv: ಈ ವರ್ಷದ ಡಿಸೆಂಬರ್‌ನಲ್ಲಿ ಟಾಟಾ ಕರ್ವ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. 360 ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಆ್ಯಂಡ್ರಾಯ್ಡ್ ಆಟೋ ಜೊತೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆ್ಯಪಲ್ ಕಾರ್‌ಪ್ಲೇ, ಪನೋರಮಿಕ್ ಗ್ಲಾಸ್ ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಈ ಕಾರಿನಲ್ಲಿ ಲಭ್ಯವಿರುತ್ತದೆ. ಈ ಕಾರಿನ ಬೆಲೆ ರೂ.15 ಲಕ್ಷದಿಂದ ರೂ.20 ಲಕ್ಷದವರೆಗೆ ಇರಲಿದೆಯಂತೆ.

5. Tata Harrier EV: ಟಾಟಾ ಹ್ಯಾರಿಯರ್ EV ಅನ್ನು ಮಾರ್ಚ್ 2025 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.24 ಲಕ್ಷದಿಂದ ರೂ.28 ಲಕ್ಷದವರೆಗೆ ಇರಲಿದೆಯಂತೆ. ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಫ್ಲಶ್ ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು, ಹೊಸ ಹಿಂಬದಿ ಬಂಪರ್‌ಗಳು, ಎಲ್‌ಇಡಿ ಟೈಲ್ ಲೈಟ್‌ಗಳು ಈ ಕಾರಿನಲ್ಲಿ ಇರುತ್ತವೆ. ಈ ಕಾರಿನ ಒಳಭಾಗವು 10.25 ಇಂಚಿನ ಪರದೆ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸ್ಮಾರ್ಟ್‌ಫೋನ್ ಸಂಪರ್ಕ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಪನೋರಮಿಕ್ ಸನ್‌ರೂಫ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

6. Tata Safari EV: ಮಾರುಕಟ್ಟೆಗೆ ಬರಲಿರುವ ಕಾರುಗಳ ಪಟ್ಟಿಯಲ್ಲಿ ಇದು ಒಂದು. ಟಾಟಾ ಸಫಾರಿ ಇವಿಯ ಬೆಲೆ ರೂ.26 ಲಕ್ಷದಿಂದ ರೂ.30 ಲಕ್ಷದವರೆಗೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಈ ಕಾರು ಮಾರುಕಟ್ಟೆಗೆ ಬರಲಿದೆ. ಈ ಕಾರು ಹೊಸ ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸ, ಹೊಸ ಅಲಾಯ್ ಚಕ್ರಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ವೆಂಟಿಲೇಟೆಡ್ ಸೀಟ್‌ಗಳು ಈ ಕಾರಿನಲ್ಲಿ ಲಭ್ಯವಿರುತ್ತವೆ.

7. Tata Sierra EV: ಟಾಟಾ ಸಿಯೆರಾ ಇವಿ ಮುಂದಿನ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ಕಾರಿನ ಬೆಲೆ ರೂ.25 ಲಕ್ಷದಿಂದ ರೂ.30 ಲಕ್ಷದವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫ್ಲಶ್ ಡೋರ್ ಹ್ಯಾಂಡಲ್‌ಗಳು, ವೆಂಟಿಲೇಟೆಡ್, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರಲಿದೆ.

8. Tata Avinya: ಮಾರುಕಟ್ಟೆಗೆ ಬರಲಿರುವ ಕಾರುಗಳ ಪಟ್ಟಿಯಲ್ಲಿ ಇದು ಒಂದು. ಟಾಟಾ ಅವಿನ್ಯಾ ಕಾರು ಮುಂದಿನ ವರ್ಷ ಜೂನ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಕಾರಿನ ಬೆಲೆ ಸುಮಾರು 30 ಲಕ್ಷದಿಂದ 60 ಲಕ್ಷ ಇರಲಿದೆಯಂತೆ. ಈ ಕಾರನ್ನು ಒಂದೇ ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ ದೂರ ಕ್ರಮಿಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರು ಸೈಡ್ ವ್ಯೂ ಕ್ಯಾಮೆರಾಗಳನ್ನು ಹೊಂದಿರುತ್ತದೆ. ಈ ಕಾರಿನ ಉದ್ದ 4.3 ಮೀಟರ್.

9. Tata Altroz EV: ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಬರುತ್ತಿರುವ ಕಾರುಗಳಲ್ಲಿ ಇದು ಕೂಡ ಒಂದು. Tata Altroz ​​EV ಬೆಲೆ ರೂ.12 ಲಕ್ಷದಿಂದ ರೂ.15 ಲಕ್ಷದ ನಡುವೆ ಇರಲಿದೆಯಂತೆ. ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಈ ಕಾರು ಮಾರುಕಟ್ಟೆಗೆ ಬರಲಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 306 ಕಿ.ಮೀ ಕ್ರಮಿಸಬಹುದು. ಈ EV 26 kWh ಬ್ಯಾಟರಿಯೊಂದಿಗೆ ಬರುತ್ತದೆ. ಈ ಕಾರನ್ನು ಮನೆಯಲ್ಲಿಯೇ 8 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ತೋರುತ್ತದೆ.

ಇದನ್ನೂ ಓದಿ: 50 ಎಂಪಿ ಕ್ಯಾಮೆರಾ ಹೊಂದಿರುವ ನಥಿಂಗ್​​ನ CMF Phone 1 ಬಿಡುಗಡೆ: ಬೆಲೆ ಎಷ್ಟು ಅಂತಾ ನಿಮಗೆ ಗೊತ್ತಾ? - Nothing CMF Phone 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.