ETV Bharat / technology

ವಿಶ್ವದ 2ನೇ ಅತಿ ದೊಡ್ಡ ವಜ್ರ ಪತ್ತೆ: ಇದರ ಬೆಲೆ ಎಷ್ಟಿರಬಹುದು ಗೊತ್ತಾ? - Second Biggest Diamond Found

author img

By ETV Bharat Tech Team

Published : Aug 26, 2024, 6:01 PM IST

ಆಫ್ರಿಕನ್ ದೇಶವಾದ ಬೋಟ್ಸ್‌ವಾನಾದಲ್ಲಿ ಎಕ್ಸ್-ರೇ ಟ್ರಾನ್ಸ್‌ಮಿಷನ್ ತಂತ್ರಜ್ಞಾನದ ಮೂಲಕ ಸುಮಾರು 2,492 ಕ್ಯಾರೆಟ್​ನ ವಿಶ್ವದ ಎರಡನೇ ಅತಿದೊಡ್ಡ ವಜ್ರವನ್ನು ಕಂಡುಹಿಡಿಯಲಾಗಿದೆ.

LARGEST DIAMOND  SECOND BIGGEST DIAMOND  BOTSWANA DIAMOND DETAILS  BOTSWANA DIAMOND NEWS
ವಿಶ್ವದ 2ನೇ ಅತಿ ದೊಡ್ಡ ವಜ್ರ ಪತ್ತೆ (AP)

ಗ್ಯಾಬೊರೊನ್ (ಬೋಟ್ಸ್‌ವಾನಾ): ಆಫ್ರಿಕನ್ ದೇಶವಾದ ಬೋಟ್ಸ್‌ವಾನಾ ವಿಶ್ವದ ಪ್ರಮುಖ ವಜ್ರ ಉತ್ಪಾದಕರಲ್ಲಿ ಒಂದಾಗಿದೆ. ಪ್ರಪಂಚದ ಒಟ್ಟು ವಜ್ರ ಉತ್ಪಾದನೆಯ ಶೇಕಡ 20ರಷ್ಟು ಇಲ್ಲಿಯೇ ಉತ್ಪಾದನೆಯಾಗುತ್ತದೆ. ಈ ವೇಳೆ ಬೋಟ್ಸ್‌ವಾನಾ ಕೆನಡಾ ಮೂಲದ ಲುಕಾರ ಡೈಮಂಡ್ ಕಂಪನಿಯ ಒಡೆತನದ ಗಣಿಯಲ್ಲಿ ಸುಮಾರು 2,492 ಕ್ಯಾರೆಟ್​ನ ವಜ್ರ ಪತ್ತೆಯಾಗಿದೆ.

largest diamond  second biggest Diamond  Botswana Diamond details  Botswana Diamond news
ವಿಶ್ವದ 2ನೇ ಅತಿ ದೊಡ್ಡ ವಜ್ರ ಪತ್ತೆ (AP)

ವಿಶ್ವದ ಎರಡನೇ ಅತಿ ದೊಡ್ಡ ವಜ್ರ: 1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ 3,106 ಕ್ಯಾರೆಟ್​ನ 'ಕುಲಿನನ್ ಡೈಮಂಡ್' (Cullinan Diamond) ವಿಶ್ವದ ಅತಿದೊಡ್ಡ ವಜ್ರವಾಗಿದೆ. ಇದರ ನಂತರ, 'ಬೋಟ್ಸ್‌ವಾನಾ ಡೈಮಂಡ್' ಅನ್ನು ಇದುವರೆಗೆ ಕಂಡುಹಿಡಿದ ಅತಿದೊಡ್ಡ ವಜ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಬೋಟ್ಸ್‌ವಾನಾ ವಜ್ರವು ವಿಶ್ವದ ಎರಡನೇ ಅತಿ ದೊಡ್ಡ ವಜ್ರವಾಗಿದೆ ಎಂದು ಲುಕಾರಾ ಡೈಮಂಡ್ ಕಂಪನಿ ಅಧ್ಯಕ್ಷ ವಿಲಿಯಂ ಲ್ಯಾಂಬ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ದೊಡ್ಡ ಗಾತ್ರದ ಮತ್ತು ಹೆಚ್ಚಿನ ಮೌಲ್ಯದ ವಜ್ರಗಳನ್ನು ಗುರುತಿಸಲು ಮತ್ತು ರಕ್ಷಿಸಲು 2017 ರಲ್ಲಿ ಸ್ಥಾಪಿಸಲಾದ ಮೆಗಾ ಡೈಮಂಡ್ ರಿಕವರಿ (ಎಮ್‌ಡಿಆರ್) ಕಂಪನಿಯು ಎಕ್ಸ್-ರೇ ಟ್ರಾನ್ಸ್‌ಮಿಷನ್ (ಎಕ್ಸ್‌ಆರ್‌ಟಿ) ತಂತ್ರಜ್ಞಾನವನ್ನು ಬಳಸಿಕೊಂಡು 'ಬೋಟ್ಸ್‌ವಾನಾ ಡೈಮಂಡ್' ಅನ್ನು ಪತ್ತೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.

ಎಕ್ಸ್ ರೇ ಟ್ರಾನ್ಸ್​ಮಿಷನ್ ತಂತ್ರಜ್ಞಾನ: ಕೆನಡಾ ಮೂಲದ ಲುಕಾರ ಡೈಮಂಡ್ ಕಂಪನಿ 2012ರಲ್ಲಿ ಬೋಟ್ಸ್​ವಾನಾದಲ್ಲಿ ವಜ್ರದ ಗಣಿಗಾರಿಕೆ ಆರಂಭಿಸಿತ್ತು. ಅಂದಿನಿಂದ, 216 ವಜ್ರಗಳು ತಲಾ $ 1 ಮಿಲಿಯನ್‌ಗಿಂತ ಹೆಚ್ಚು ಮಾರಾಟವಾಗಿವೆ ಮತ್ತು 11 ಕ್ಕೂ ಹೆಚ್ಚು ಸಿಂಗಲ್ ಡೈಮಂಡ್‌ಗಳು ತಲಾ $ 10 ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟವಾಗಿವೆ.

ಅದರಂತೆ, 2019 ರಲ್ಲಿ, 1,758 ಕ್ಯಾರೆಟ್ ಮೌಲ್ಯದ ವಜ್ರವನ್ನು ಗರೋವ್ ಗಣಿಯಲ್ಲಿ ಲುಕಾರಾ ಕಂಪನಿ ಪತ್ತೆ ಮಾಡಿತು. ಬೋಟ್ಸ್‌ವಾನಾದಲ್ಲಿ ಪತ್ತೆಯಾದ ಮೊದಲ ಅತಿ ದೊಡ್ಡ ವಜ್ರ ಇದಾಗಿದೆ. ಅದಕ್ಕೆ ‘ಚೆವಿಲೋ ಡೈಮಂಡ್’ (Chevilo Diamond) ಎಂದು ಹೆಸರಿಡಲಾಯಿತು.

ಮೆಗಾ ಡೈಮಂಡ್ ರಿಕವರಿಯಿಂದ ಎಕ್ಸ್-ರೇ ಟ್ರಾನ್ಸ್​ಮಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು 2021 ರಲ್ಲಿ ಲುಕಾರಾ ಬೋಟ್ಸ್​ವಾನಾದಲ್ಲಿ 1,174-ಕ್ಯಾರೆಟ್ ವಜ್ರವನ್ನು ಕಂಡುಹಿಡಿದರು. 2,492-ಕ್ಯಾರೆಟ್ ಬೋಟ್ಸ್​ವಾನಾ ವಜ್ರವನ್ನು ಅದೇ ಎಕ್ಸ್-ರೇ ಟ್ರಾನ್ಸ್​ಮಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಮರುಪಡೆಯಲಾಗಿದೆ.

ಲುಕಾರಾಗೆ ಶುಭಹಾರೈಸಿದ ಬೋಟ್ಸ್‌ವಾನಾ ಅಧ್ಯಕ್ಷ: ಲುಕಾರಾ ಡೈಮಂಡ್ ಕಂಪನಿಯ ಒಡೆತನದ ಬೋಟ್ಸ್‌ವಾನಾ ಮೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ನಸೀಮ್ ಲಹ್ರಿ ಅವರು ಕಳೆದ ಗುರುವಾರ ಬೋಟ್ಸ್‌ವಾನಾದ ಅಧ್ಯಕ್ಷ ಮೊಕ್ವೆಟ್ಸಿ ಮಸಿಸಿ ಅವರಿಗೆ ಪಾಮ್ ಗಾತ್ರದ ಅರೆಪಾರದರ್ಶಕ ಬೋಟ್ಸ್‌ವಾನಾ ವಜ್ರವನ್ನು ನೀಡಿದರು.

ಈ ವಜ್ರದ ಬಗ್ಗೆ ವಿವರಿಸಿದ ನಸೀಮ್ ಲಹ್ರಿ ಅವರು, "ಬೋಟ್ಸ್​ವಾನಾದಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ದೊಡ್ಡ ವಜ್ರ ಮತ್ತು ವಿಶ್ವದ ಎರಡನೇ ವಜ್ರ" ಇದಾಗಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಅಧ್ಯಕ್ಷ ಮೊಕ್ವೆಟ್ಸಿ ಮಾಸಿಸಿ ಅವರು ಲುಕಾರಾ ಡೈಮಂಡ್ ಅನ್ನು ಅಭಿನಂದಿಸಿದರು.

40 ಮಿಲಿಯನ್ ಡಾಲರ್: ಬೋಟ್ಸ್​ವಾನಾದ ರಾಜಧಾನಿ ಗ್ಯಾಬೊರೋನ್‌ನಿಂದ ಉತ್ತರಕ್ಕೆ ಸುಮಾರು 500 ಕಿ.ಮೀ. ದೂರದ ಗರೋವ್ ಗಣಿಯಲ್ಲಿ ಈ ವಜ್ರ ಪತ್ತೆಯಾಗಿದೆ. ಲುಕಾರಾ ಡೈಮಂಡ್ ಕಂಪನಿಯು ಈ ವಜ್ರದ ಗುಣಮಟ್ಟ ಮತ್ತು ಮೌಲ್ಯವನ್ನು ಬಹಿರಂಗಪಡಿಸಿಲ್ಲ. ಆದರೂ ಸಹ ಪತ್ರಿಕೆಯೊಂದು ಇದರ ಮೌಲ್ಯ ಸುಮಾರು $40 ಮಿಲಿಯನ್ ಆಗಿರಬಹುದೆಂದು ವರದಿ ಮಾಡಿದೆ.

ಓದಿ: ಅಳಿವಿನಂಚಿನಲ್ಲಿರುವ ನಾರ್ಥನ್​ ಬಾಲ್ಡ್​ ಐಬಿಸ್​ ಪಕ್ಷಿಗಳು: ವಲಸೆ ಮಾರ್ಗದ ಪಾಠ ಮಾಡುತ್ತಿರುವ ತಜ್ಞರು - Bird Species Extinct In Europ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.