Tata and Kia Cars Price Hike: ಹೊಸ ವರ್ಷ ಸಮೀಪಿಸುತ್ತಿದ್ದಂತೆ ಕಾರು ತಯಾರಿಕಾ ಕಂಪನಿಗಳು ದೇಶೀಯವಾಗಿ ತಮ್ಮ ಉತ್ಪನ್ನಗಳ ಬೆಲೆಯನ್ನು ಒಂದೊಂದಾಗಿ ಹೆಚ್ಚಿಸುತ್ತಿವೆ. ಪ್ರಮುಖ ಕಂಪನಿಗಳು ಈಗಾಗಲೇ ಬೆಲೆ ಏರಿಕೆ ಘೋಷಿಸಿವೆ. ಇತ್ತೀಚೆಗೆ ಟಾಟಾ ಮೋಟಾರ್ಸ್ ಮತ್ತು ಕಿಯಾ ಕೂಡ ಈ ಪಟ್ಟಿಗೆ ಸೇರಿಕೊಂಡಿವೆ. ಮುಂದಿನ ವರ್ಷದಿಂದ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಹೊಸ ಬೆಲೆ ಯಾವಾಗ ಆರಂಭ?: ಜನವರಿ 1 ರಿಂದ ಪರಿಷ್ಕೃತ ಬೆಲೆಗಳು ಜಾರಿಗೆ ಬರಲಿವೆ ಎಂದು ಟಾಟಾ ಮೋಟಾರ್ಸ್ ಮತ್ತು ಕಿಯಾ ತಿಳಿಸಿದೆ. ಟಾಟಾ ಮೋಟಾರ್ಸ್ ಸೋಮವಾರ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಹೇಳಿದೆ. ಇವುಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನೂ ಹೆಚ್ಚಿಸಲಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ಕಿಯಾ ಕೂಡ ಬೆಲೆ ಹೆಚ್ಚಳ ಘೋಷಣೆ: ಆಟೋ ಮೊಬೈಲ್ ಕಂಪನಿ ಕಿಯಾ ಕೂಡ ತನ್ನ ಕಾರುಗಳ ಬೆಲೆಯನ್ನು ಜನವರಿ 1 ರಿಂದ ಶೇಕಡಾ 2 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ಬೆಲೆಗಳು ಮತ್ತು ಹೆಚ್ಚುತ್ತಿರುವ ಪೂರೈಕೆ ಸರಪಳಿ ವೆಚ್ಚಗಳಿಂದಾಗಿ ಬೆಲೆಗಳು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅದು ಹೇಳಿದೆ. ಇದುವರೆಗೆ ದೇಶೀಯವಾಗಿ 16 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಕಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಲೆ ಏರಿಕೆ ಪಟ್ಟಿಯಲ್ಲಿರುವ ಇತರ ಕಂಪನಿಗಳು: ಹ್ಯುಂಡೈ ಮೋಟಾರ್ ಇಂಡಿಯಾ, ನಿಸ್ಸಾನ್ ಇಂಡಿಯಾ, ಆಡಿ ಇಂಡಿಯಾ, ಬಿಎಂಡಬ್ಲ್ಯು ಇಂಡಿಯಾ, ಮರ್ಸಿಡಿಸ್ ಬೆಂಜ್, ಮಾರುತಿ ಸುಜುಕಿ, ಮಹೀಂದ್ರಾ ಅಂಡ್ ಮಹೀಂದ್ರಾ ಈಗಾಗಲೇ ತಮ್ಮ ಉತ್ಪನ್ನಗಳ ಬೆಲೆ ಏರಿಕೆಯನ್ನು ಘೋಷಿಸಿವೆ. ಆದರೆ, ಈ ಬೆಲೆ ಏರಿಕೆ ಕೆಲವರಿಗೆ ಅನ್ವಯಿಸುವುದಿಲ್ಲ ಎಂದು ಮರ್ಸಿಡಿಸ್ ಕಂಪನಿ ತಿಳಿಸಿದೆ.
ಓದಿ: ಅದ್ಭುತ!!.. ಗೂಗಲ್ ವಿಲೋ ವೇರಿ ಪವರ್ಫುಲ್: ಇದರ ಸ್ಪೀಡ್ಗೆ ಎಲ್ಲರೂ ಫಿದಾ ಆಗಲೇ ಬೇಕು?