Skoda Kylaq Booking: ಇತ್ತೀಚೆಗೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸ್ಕೋಡಾ ಕೈಲಾಕ್ಗೆ ಜನರು ಮನ ಸೋತಿದ್ದಾರೆ. ದೇಶದ್ಯಾದಂತ ಸ್ಕೋಡಾ ಕೈಲಾಕ್‌ನ ಬುಕಿಂಗ್ ಡಿಸೆಂಬರ್ 2 ರಿಂದ ಪ್ರಾರಂಭಿಸಲಾಯಿತು. ಕಾರು ಬುಕಿಂಗ್ ಪ್ರಕ್ರಿಯೆ ಆರಂಭಗೊಂಡು ಕೇವಲ ಹತ್ತು ದಿನಗಳು ಮಾತ್ರ ಕಳೆದಿವೆ. ಆದರೆ ಈ ವಾಹನ ತಯಾರಕರು ಸುಮಾರು 10 ಸಾವಿರ ಯುನಿಟ್‌ಗಳ ಬುಕಿಂಗ್‌ಗಳನ್ನು ಸ್ವೀಕರಿಸಿದ್ದಾರೆ. ಈ ಹೊಸ ಸಬ್ - ಕಾಂಪ್ಯಾಕ್ಟ್ SUV ಗೆ ಇಷ್ಟೊಂದು ಬೇಡಿಕೆ ಬರಲು ಕಾರಣ ಈ ಕಾರಿನ ಬೆಲೆ ಆಗಿರಬಹುದು ಅಥವಾ ಪವರ್ ಮತ್ತು ವೈಶಿಷ್ಟ್ಯಗಳ ಆಗಿರಬಹುದಾಗಿದೆ.
ಸ್ಕೋಡಾ ಕೈಲಾಕ್ ಬೆಲೆ: 7.89 ಲಕ್ಷದ ಆರಂಭಿಕ ಬೆಲೆಯೊಂದಿಗೆ ಸ್ಕೋಡಾ ಕೈಲಾಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ವಾಹನದ ಉನ್ನತ ಶ್ರೇಣಿಯ ರೂಪಾಂತರದ ಬೆಲೆ 14.40 ಲಕ್ಷ ರೂ. ಆಗಿದೆ. ವಾಹನದ ವಿತರಣೆಯು ಜನವರಿ 27, 2025 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸ್ಕೋಡಾ ಕೈಲಾಕ್ ಬೆಲೆ ಶ್ರೇಣಿಯಲ್ಲಿ, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ XUV 3XO ನಂತಹ ಕಾರುಗಳು ಸಹ ಲಭ್ಯವಿದೆ. ಮಾರುತಿ ಸುಜುಕಿ ಬ್ರೆಝಾ ಎಕ್ಸ್ ಶೋ ರೂಂ ಬೆಲೆ ರೂ 8.34 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಟಾ ನೆಕ್ಸಾನ್ ಬೆಲೆ 7.99 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಮಹೀಂದ್ರಾ XUV 3XO ನ ಎಕ್ಸ್ ಶೋ ರೂಂ ಬೆಲೆಯು 7.79 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 15.49 ಲಕ್ಷದವರೆಗೆ ಇದೆ.
ಸ್ಕೋಡಾದ ಈ ಹೊಸ ಕಾರು ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್‌ನಂತಹ ಎಲ್ಲ ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಕೋಡಾ ಕೈಲಾಕ್ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ವಾಹನದಲ್ಲಿ ಅಳವಡಿಸಲಾಗಿರುವ ಈ ಎಂಜಿನ್ 113 bhp ಪವರ್ ನೀಡುತ್ತದೆ ಮತ್ತು 179 Nm ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೋಡಾ ಕಾರಿನ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಹೊಂದಿದೆ. ಇದೇ ಎಂಜಿನ್ ಅನ್ನು ಸ್ಕೋಡಾ ಕುಶಾಕ್‌ನಲ್ಲಿಯೂ ಬಳಸಲಾಗಿದೆ.
ಸ್ಕೋಡಾ ಕೈಲಾಕ್ ಮಾರ್ಡನ್ ಸಾಲಿಡ್ ಡಿಸೈನ್ ಹೊಂದಿದೆ. ಈ ವಾಹನವು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಕಾರು ಡ್ಯುಯಲ್-ಸ್ಪೋಕ್ ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಒಳಗೊಂಡಿದೆ. ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ವೈಶಿಷ್ಟ್ಯಗಳೊಂದಿಗೆ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಈ ಕಾರಿನಲ್ಲಿ ಕಾಣಬಹುದು. ವಾಹನವು 446 ಲೀಟರ್‌ಗಳ ಬೂಟ್-ಸ್ಪೇಸ್ ಅನ್ನು ಹೊಂದಿದ್ದು, ಇದನ್ನು 1,265 ಲೀಟರ್‌ಗಳಿಗೆ ವಿಸ್ತರಿಸಬಹುದು.
ಓದಿ: ತನ್ನದೇ ಪ್ಲಾಟ್ನಲ್ಲಿ ಶವವಾಗಿ ಪತ್ತೆಯಾದ ಓಪನ್ AI ಮಾಜಿ ರಿಸರ್ಚರ್! 18 ದಿನಗಳ ಬಳಿಕ ಪ್ರಕರಣ ಬೆಳಕಿಗೆ