ETV Bharat / technology

ಇಂದು ಪ್ಯಾರಿಸ್​ನಲ್ಲಿ ಸ್ಯಾಮ್​​ಸಂಗ್ ಅನ್​ಪ್ಯಾಕ್ಡ್​ ಈವೆಂಟ್​: ಹೊಸ ಸಾಧನಗಳ ಅನಾವರಣ ನಿರೀಕ್ಷೆ - Samsung Galaxy Unpacked Event

ಇಂದು ಪ್ಯಾರಿಸ್​ನಲ್ಲಿ ಸ್ಯಾಮ್​ಸಂಗ್ ಅನ್​ ಪ್ಯಾಕ್ಡ್​ ಈವೆಂಟ್​ ನಡೆಯಲಿದೆ.

ಇಂದು ಪ್ಯಾರಿಸ್​ನಲ್ಲಿ ಸ್ಯಾಮ್​​ಸಂಗ್ ಅನ್​ಪ್ಯಾಕ್ಡ್​ ಈವೆಂಟ್
ಸ್ಯಾಮ್​​ಸಂಗ್ ಅನ್​ಪ್ಯಾಕ್ಡ್​ ಈವೆಂಟ್ (IANS)
author img

By ETV Bharat Karnataka Team

Published : Jul 10, 2024, 1:31 PM IST

ನವದೆಹಲಿ: ಸ್ಯಾಮ್ ಸಂಗ್ ತನ್ನ ಬಹು ನಿರೀಕ್ಷಿತ ಗ್ಯಾಲಕ್ಸಿ ಅನ್​ಪ್ಯಾಕ್ಡ್​ ಈವೆಂಟ್​ ಜುಲೈ 10 ರಂದು ಪ್ಯಾರಿಸ್​ನಲ್ಲಿ ನಡೆಯಲಿದೆ. ಈ ವರ್ಷದ ಈವೆಂಟ್ ಫೋಲ್ಡಬಲ್ ಫೋನ್​ಗಳು, ಇಯರ್ ಬಡ್​ಗಳು, ಸ್ಮಾರ್ಟ್ ವಾಚ್​ಗಳು ಮತ್ತು ಕುತೂಹಲದಿಂದ ಕಾಯುತ್ತಿರುವ ಗ್ಯಾಲಕ್ಸಿ ರಿಂಗ್ ಹೆಲ್ತ್ ವೇರಬಲ್ ಸೇರಿದಂತೆ ವಿವಿಧ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

ಈ ವರ್ಷದ ಈವೆಂಟ್​ನಲ್ಲಿ, ವಿವಿಧ ಗ್ಯಾಲಕ್ಸಿ ಸಾಧನಗಳಲ್ಲಿ ಆನ್-ಡಿವೈಸ್ ಅನುವಾದ ಮತ್ತು ಫೋಟೋ ಎಡಿಟಿಂಗ್​ನಂತಹ ಎಐ ವೈಶಿಷ್ಟ್ಯಗಳನ್ನು ಸಂಯೋಜಿಸುವ ತನ್ನ ಗ್ಯಾಲಕ್ಸಿ ಎಐ ವ್ಯವಸ್ಥೆಯನ್ನು ಸ್ಯಾಮ್​ಸಂಗ್ ಅನಾವರಣಗೊಳಿಸುವ ಸಾಧ್ಯತೆಯಿದೆ. ಅಲ್ಲದೆ ಈ ಹೊಸ ಗ್ಯಾಲಕ್ಸಿ ಎಐ ತಂತ್ರಜ್ಞಾನವನ್ನು ಮುಂಬರುವ ಗ್ಯಾಲಕ್ಸಿ ಝಡ್ ಸರಣಿಯ ಅಘೋಷಿತ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಫ್ಲಿಪ್ 6 ಸ್ಮಾರ್ಟ್​ಫೋನ್​ಗಳಲ್ಲಿ ಅಳವಡಿಸುವ ನಿರೀಕ್ಷೆಯಿದೆ.

ಎರಡೂ ಫೋಲ್ಡಬಲ್ ಫೋನ್​ಗಳ ಬಗ್ಗೆ ಹೊಸ ಮಾಹಿತಿಯ ಘೋಷಣೆ ಈವೆಂಟ್​ನ ಪ್ರಮುಖ ಹೈಲೈಟ್ ಆಗಿರಬಹುದು. ಮೂಲಗಳ ಪ್ರಕಾರ, ಝಡ್ ಫೋಲ್ಡ್ 6 ಹಗುರವಾದ ವಿನ್ಯಾಸ, ಸುಧಾರಿತ ಬ್ಯಾಟರಿ ಬಾಳಿಕೆ ಮತ್ತು ಪ್ರಕಾಶಮಾನವಾದ 7.6-ಇಂಚಿನ ಆಂತರಿಕ ಡಿಸ್​ಪ್ಲೇಯನ್ನು ಹೊಂದಿದೆ. ಝಡ್ ಫ್ಲಿಪ್ 6 50 ಎಂಪಿ ಕ್ಯಾಮೆರಾ, ದೊಡ್ಡ 4,000 ಎಂಎಎಚ್ ಬ್ಯಾಟರಿ ಮತ್ತು ನೈಜ-ಸಮಯದ ಭಾಷಾ ಅನುವಾದಕ್ಕಾಗಿ ಹೊಸ ಕವರ್ ಸ್ಕ್ರೀನ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಎರಡೂ ಫೋನ್​ಗಳು ಶಕ್ತಿಯುತ ಸ್ನ್ಯಾಪ್ ಡ್ರಾಗನ್ 8 ಜೆನ್ 3 ಪ್ರೊಸೆಸರ್ ಅನ್ನು ಹೊಂದಿರುವ ಸಾಧ್ಯತೆಯಿದೆ.

ಕಂಪನಿಯು ಹೊಸ ಫ್ಲ್ಯಾಗ್ ಶಿಪ್ ಸ್ಮಾರ್ಟ್ ವಾಚ್, ಗ್ಯಾಲಕ್ಸಿ ವಾಚ್ 7 ಅಲ್ಟ್ರಾವನ್ನು ಅನಾವರಣಗೊಳಿಸಬಹುದು ಎಂದು ಹೇಳಲಾಗಿದೆ. ಈ ವಾಚ್ ಆಪಲ್ ವಾಚ್ ಅಲ್ಟ್ರಾದಂತೆಯೇ ಹೊಸ "squircle" ಕೇಸ್ ವಿನ್ಯಾಸ, ಮೂರನೇ ಬಟನ್ ಮತ್ತು ವಾಚ್ ಬ್ಯಾಂಡ್ ಕನೆಕ್ಟರ್ ಅನ್ನು ಹೊಂದಿರಬಹುದು ಎಂದು ದಿ ವರ್ಜ್ ವರದಿ ಮಾಡಿದೆ.

ಈ ವರ್ಷದ ಆರಂಭದಲ್ಲಿ ನಡೆದ ಎಂಡಬ್ಲ್ಯೂಸಿ 2024 ನಲ್ಲಿ ಅನಾವರಣಗೊಂಡ ಸ್ಯಾಮ್ ಸಂಗ್ ಗ್ಯಾಲಕ್ಸಿ ರಿಂಗ್, ಅನ್ ಪ್ಯಾಕ್ಡ್ ಈವೆಂಟ್​ ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಂವೇದಕಗಳನ್ನು ಹೊಂದಿರುವ ಧರಿಸಬಹುದಾದ ಈ ಸಾಧನವು ಬಳಕೆದಾರರ ಆರೋಗ್ಯವನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಹೃದಯ ಬಡಿತ, ಉಸಿರಾಟದ ದರ ಮತ್ತು ನಿದ್ರೆಯ ಮಾದರಿಗಳಂತಹ ಪ್ರಮುಖ ಮಾಪನಗಳ ದಾಖಲೆಯನ್ನು ಇಟ್ಟುಕೊಳ್ಳುತ್ತದೆ.

ಇದನ್ನೂ ಓದಿ : 50 ಎಂಪಿ ಕ್ಯಾಮೆರಾ ಹೊಂದಿರುವ ನಥಿಂಗ್​​ನ CMF Phone 1 ಬಿಡುಗಡೆ: ಬೆಲೆ ಎಷ್ಟು ಅಂತಾ ನಿಮಗೆ ಗೊತ್ತಾ? - Nothing CMF Phone 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.