ETV Bharat / technology

ಸ್ಯಾಮ್​ಸಂಗ್ Galaxy S24 ಸ್ಮಾರ್ಟ್​​ಫೋನ್ ಮಾರಾಟ ಶೇ 8ರಷ್ಟು ಹೆಚ್ಚಳ

ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್ 24 ಸರಣಿಯ ಸ್ಮಾರ್ಟ್​ಫೋನ್​ಗಳ ಮಾರಾಟ ಶೇ 8ರಷ್ಟು ಏರಿಕೆಯಾಗಿದೆ.

Sales of new Samsung Galaxy S24 rise 8 pc globally

author img

By ETV Bharat Karnataka Team

Published : Mar 11, 2024, 7:15 PM IST

ಸಿಯೋಲ್: ಬಿಡುಗಡೆಯಾದ ಮೊದಲ ಮೂರು ವಾರಗಳಲ್ಲಿ ಸ್ಯಾಮ್ ಸಂಗ್​​ನ ಹೊಸ ಗ್ಯಾಲಕ್ಸಿ ಎಸ್ 24 ಸರಣಿಯ ಸ್ಮಾರ್ಟ್ ಫೋನ್​ ಮಾರಾಟ ಸತತವಾಗಿ ಏರಿಕೆ ಕಾಣುತ್ತಿದೆ ಹಾಗೂ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಈ ಫೋನ್​ಗಳ ಮಾರಾಟ ಎರಡಂಕಿಯ ಬೆಳವಣಿಗೆ ತೋರಿಸಿದೆ ಎಂದು ಉದ್ಯಮದ ಅಂಕಿ - ಅಂಶಗಳು ಸೋಮವಾರ ತಿಳಿಸಿವೆ.

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್ ಪಾಯಿಂಟ್ ರಿಸರ್ಚ್ ಅಂಕಿ - ಅಂಶಗಳ ಪ್ರಕಾರ, ಜನವರಿ 28 ಮತ್ತು ಫೆಬ್ರವರಿ 17 ರ ನಡುವೆ ಗ್ಯಾಲಕ್ಸಿ ಎಸ್ 24 ನ ಜಾಗತಿಕ ಮಾರಾಟವು ಹಿಂದಿನ ಗ್ಯಾಲಕ್ಸಿ ಎಸ್ 23 ಸರಣಿಗೆ ಹೋಲಿಸಿದರೆ ಶೇಕಡಾ 8 ರಷ್ಟು ಹೆಚ್ಚಾಗಿದೆ. ವಿಶೇಷವಾಗಿ ಸ್ಯಾಮ್ ಸಂಗ್​ನ ಗ್ಯಾಲಕ್ಸಿ ಎಸ್ 24 ಸ್ಮಾರ್ಟ್ ಫೋನ್ ಮಾರಾಟವು ತನ್ನ ದೇಶೀಯ ಮಾರುಕಟ್ಟೆಯಲ್ಲಿ ಅದರ ಹಿಂದಿನದಕ್ಕಿಂತ ಶೇಕಡಾ 22 ರಷ್ಟು ಹೆಚ್ಚಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಶ್ಚಿಮ ಯುರೋಪ್, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಪ್ರೀ ಆರ್ಡರ್​ಗಳಿಂದಾಗಿ ಅದರ ಮಾರಾಟವು ಶೇಕಡಾ 28 ರಷ್ಟು ಹೆಚ್ಚಾಗಿದೆ. ಅಮೆರಿಕದಲ್ಲಿ ಕೂಡ ಈ ಫೋನ್​ ಮಾರಾಟದಲ್ಲಿ ಶೇಕಡಾ 14 ರಷ್ಟು ಏರಿಕೆ ಕಂಡು ಬಂದಿದೆ.

ಅತ್ಯಂತ ದುಬಾರಿ ಎಸ್ 24 ಅಲ್ಟ್ರಾ ಮಾದರಿಯ ಮಾರಾಟವು ಒಟ್ಟು ಶೇಕಡಾ 52 ರಷ್ಟಿದ್ದರೆ, ಗ್ಯಾಲಕ್ಸಿ ಎಸ್ 24ನ ಮಾರಾಟ ಪ್ರಮಾಣ ಶೇಕಡಾ 27 ಮತ್ತು ಗ್ಯಾಲಕ್ಸಿ ಎಸ್ 24 ಪ್ಲಸ್ ನ ಮಾರಾಟ ಪ್ರಮಾಣ ಶೇಕಡಾ 21ರಷ್ಟಿದೆ.

ಜನವರಿಯಲ್ಲಿ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 24 ಸರಣಿಯು ಆನ್ - ಡಿವೈಸ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಹೊಂದಿರುವ ಸ್ಯಾಮ್​​​​ಸಂಗ್​ನ ಮೊದಲ ಸ್ಮಾರ್ಟ್ ಫೋನ್ ಮಾದರಿಯಾಗಿದ್ದು, ಫೋನ್ ಕರೆಗಳ ಸಮಯದಲ್ಲಿ ನೈಜ - ಸಮಯದ ಅನುವಾದ ಸೌಲಭ್ಯ ಮತ್ತು ಸುಧಾರಿತ ಕ್ಯಾಮೆರಾ ಕಾರ್ಯಕ್ಷಮತೆ ಒಳಗೊಂಡಿದೆ.

79,999 ರೂ.ಗಳ ಆರಂಭಿಕ ಬೆಲೆಯೊಂದಿಗೆ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 24 ಪ್ರೀಮಿಯಂ ಸ್ಮಾರ್ಟ್ ಫೋನ್​ಗಳ ಶ್ರೇಣಿಯಲ್ಲಿ ಅತ್ಯುತ್ತಮ ಫೋನ್ ಆಗಿದೆ. ಇದು ತನ್ನ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್, ಸುಧಾರಿತ ಕ್ಯಾಮೆರಾ ಸಿಸ್ಟಮ್ ಮತ್ತು ನವೀನ ವೈಶಿಷ್ಟ್ಯಗಳೊಂದಿಗೆ ಬಳಸಲು ತುಂಬಾ ಆರಾಮದಾಯಕವಾಗಿದೆ. ಟೆಕ್ ಪರಿಣಿತರಾಗಿರಲಿ ಅಥವಾ ಸಾಮಾನ್ಯ ಬಳಕೆದಾರರಾಗಿರಲಿ ಎಲ್ಲರಿಗೂ ಹೊಂದುವಂತೆ ಈ ಫೋನ್ ವಿನ್ಯಾಸಗೊಳಿಸಲಾಗಿರುವುದು ವಿಶೇಷ.

ಇದನ್ನೂ ಓದಿ : ಫುಕುಶಿಮಾ ಪರಮಾಣು ದುರಂತಕ್ಕೆ 13 ವರ್ಷ: ಈಗ ಹೇಗಿದೆ ಸ್ಥಾವರದ ಸ್ಥಿತಿ?

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.